Sunday, December 22, 2024

ಅಕ್ರಮ ಸಂಬಂಧಕ್ಕೆ ಗಂಡನ ಕೊಲೆ : ಪ್ರಕರಣದ ದಿಕ್ಕು ತಪ್ಪಿಸಲು ವಾಮಾಚಾರದ ನಾಟಕವಾಡಿದ ಹೆಂಡತಿ

ಮೈಸೂರು : ಅಕ್ರಮ ಸಂಬಂಧಕ್ಕಾಗಿ ಗಂಡನನ್ನೆ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದ್ದು. ಹೆಂಡತಿ ಮತ್ತು ಆಕೆಯ ಸಂಗಡಿಗರಿಂದ ಕೊಲೆಯಾಗಿದೆ. ಕೊಲೆ ಮಾಡಿದ ಬಳಿಕ ಕಿರಾತಕಿ ಹೆಂಡತಿ ವಾಮಾಚಾರವಾಗಿದೆ ಎಂದು ಬಿಂಬಿಸಿಲು ಯತ್ನಿಸಿದ್ದು ಪೋಲಿಸರು ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.

ಗಂಡ ಸದಾಶಿವ ಮತ್ತು ಹೆಂಡತಿ ರಾಜೇಶ್ವರಿ ನಡುವೆ ಅನ್ಯೋನ್ಯತೆಯ ಕೊರತೆಯಿಂದಾಗಿ ಅವರಿಬ್ಬರ ನಡುವೆ ವೈಮನಸಿತ್ತು. ಇದರ ಲಾಭವನ್ನು ಪಡೆದಿದ್ದ ಶಿವಯ್ಯ ಮತ್ತು ರಂಗಸ್ವಾಮಿ ಎಂಬುವವರು ರಾಜೇಶ್ವರಿಯ ಜೊತೆ ಸ್ನೇಹ ಬೆಳೆಸಿದ್ದರು. ರಾಜೇಶ್ವರಿ ಇವರಿಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇವರೆಲ್ಲಾ ಸೇರಿ ಗಂಡ ಸದಾಶಿವನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ತಮ್ಮ ಸಂಚಿನಂತೆ ಕಳೆದ ತಿಂಗಳು 17 ನೇ ತಾರೀಕಿನಂದು ಶಿವಣ್ಣ ಮತ್ತು ರಂಗಸ್ವಾಮಿ ಸದಾಶಿವನಿಗೆ ಕಂಠಪೂರ್ತಿ ಕುಡಿಸಿದ್ದರು. ನಂತರ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಸರ್ಕಾರಿ ಶಾಲೆಯ ಬಳಿ ಕತ್ತು ಸೀಳಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಸ್ಥಳದಿಂದ ಶವವನ್ನು ಸುಮಾರು 15 ಕಿಮೀ ಹೊತ್ತೊಯ್ದಿದ್ದರು ಎಂದು ಮಾಹಿತಿ ದೊರೆತಿದೆ.

ಕೊಲೆ ಮಾಡಿದ ನಂತರ ಖರ್ತನಾಖ್​ ಹೆಂಡತಿ ಅದನ್ನು ವಾಮಾಚಾರವಾಗಿದೆ ಎಂದು ಬಿಂಬಿಸಲು ಶವದ ಸುತ್ತ ನಿಂಬೆಹಣ್ಣು, ಅರಿಶಿಣ-ಕುಂಕುಮ , ವಿಳ್ಯೆದೆಲೆ, ಜೊತೆಗೆ 101 ರೂಪಾಯಿ ಇಟ್ಟಿದ್ದರು. ತನಿಖೆಯ ದಿಕ್ಕು ತಪ್ಪಿಸಲು ಈ ಮಾಸ್ಟರ್​ ಪ್ಲಾನ್​ ರೂಪಿಸಿದ್ದಳು ಎಂದು ಮಾಹಿತಿ ದೊರೆತಿದ್ದು. ಕಿಲ್ಲರ್​ ಪತ್ನಿ ಒಟ್ಟು 7 ಸಿಮ್​​ಕಾರ್ಡ್​ಗಳನ್ನು ಬಳಸುತ್ತಿದ್ದಳು ಎಂದು ಮಾಹಿತಿ ದೊರೆತಿದೆ. ಮೂವರನ್ನು ಬಂಧಿಸಿರುವ ಪೋಲಿಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES