Sunday, December 22, 2024

ಮುಡಾ ಹಗರಣದಲ್ಲಿ ಸಿದ್ದರಾಮಯ್ಯಗೆ ಶಾಕ್​:ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ ಲೋಕಾಯುಕ್ತ

ಮೈಸೂರು : ಮೂಡಾ ಹಗರಣದಲ್ಲಿಇಂದು ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯರಿಗೆ ನೋಟಿಸ್​ ನೀಡಲಾಗಿದ್ದು.ನವೆಂಬರ್​ 6ರಂದು ವಿಚಾರಣೆಗೆ ಬರುವಂತೆ ಲೋಕಾಯುಕ್ತ ನೋಟಿಸ್​ ನೀಡಿದೆ. ಇದುವರೆಗು ಮೂಡಾ ಪ್ರಕರಣದಲ್ಲಿನ 3 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಲೋಕಾಯುಕ್ತ ಇದೀಗ A1 ಆರೋಪಿಯಾದ  ಸಿದ್ದರಾಮಯ್ಯರಿಗೆ ನೋಟಿಸ್​ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಮೂಡಾದಲ್ಲಿ ಅಕ್ರಮವಾಗಿ ಸೈಟ್​ ಪಡೆದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ನೋಟಿಸ್​ ನೀಡಿದ್ದು.ನವೆಂಬರ್​​ 6 ನೇ ತಾರೀಕು 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಎಸ್​​ಪಿ ಉದೇಶ್​ ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯರಿಗು ಮೊದಲು ಈ ಪ್ರಕರಣದ A4 ಆರೋಪಿ ದೇವರಾಜು, A3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಮತ್ತು A2 ಆರೋಪಿಯಾಗಿರುವ ಪಾರ್ವತಿಯನ್ನು ಈಗಾಗಲೇ ವಿಚಾರಣೆ ನಡೆಸಲಾಗಿದ್ದು ಇದೀಗ ಸಿದ್ದರಾಮಯ್ಯರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

RELATED ARTICLES

Related Articles

TRENDING ARTICLES