ಬೆಂಗಳೂರು : ನಗರವಾಸಿಗಳಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ಬೆಂಗಳೂರಿನ ಸಸ್ಯಕಾಶಿ ಎಂದೇ ಪ್ರಖ್ಯಾತಗೊಂಡಿರುವ ಲಾಲ್ಬಾಗ್ ಪ್ರವೇಶ ಶುಲ್ಕವನ್ನು ಹೆಚ್ಚಿಸಿದೆ. ಕೇವಲ ಪ್ರವೇಶ ಶುಲ್ಕವನ್ನು ಮಾತ್ರವಲ್ಲದೆ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
ಸಸ್ಯಕಾಶಿ ಲಾಲ್ಬಾಗ್ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು. ನಿರ್ವಹಣೆ ವಿಚಾರವನ್ನು ಮುಂದಿಟ್ಟುಕೊಂಡು ಸುಮಾರು 20 ರೂಪಾಯಿಯಷ್ಟು ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದ್ದಾರೆ. ಮಕ್ಕಳಿಗೆ 10ರೂ ಇದ್ದ ಎಂಟ್ರಿ ಫೀಸ್ ಇದೀಗಾ 20 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 12 ವರ್ಷ ಮೇಲ್ಪಟ್ಟವರಿಗೆ 30ರೂ.ಇದ್ದ ಫೀಸ್ ಇದೀಗಾ 50ರೂ.ಗೆ ಏರಿಕೆ ಮಾಡಲಾಗಿದೆ.‘
ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೇ ವಾಹನಗಳಿಗೂ ಎಂಟ್ರಿ ಫೀಸ್ ಹೆಚ್ಚಳ ಮಾಡಿದ್ದು ನಾಲ್ಕು ಚಕ್ರ ವಾಹನಗಳಿಗೆ 40ರೂ. ಇದ್ದ ದರ ಇದೀಗ 60ರೂ ಏರಿದೆ. ಟೆಂಪೋಟ್ರಾವೆಲ್ಸ್‌ಗಳಿಗೆ 70ರೂ ಇದ್ದ ದರ ಇದೀಗಾ 100ರೂ ಏರಿಕೆ ಹೆಚ್ಚಿದೆ. ಬಸ್‌ಗಳಿಗೆ 110₹ಇದ್ದ ದರ ಇದೀಗಾ 200ರೂ.ಗೆ ಏರಿಕೆಯಾಗಿದೆ.