Sunday, December 22, 2024

ಹಿಂದಿಯಲ್ಲಿ ಕೋರ್ಟ್​ ಕಲಾಪ ನಡೆಸಬೇಕು ಎಂದು ಕೋರಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ದೆಹಲಿ : ಸುಪ್ರೀಂ ಕೋರ್ಟ್‌ ಕಲಾಪಗಳು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇರಬೇಕು ಎನ್ನುವ ಸಂವಿಧಾನದ 348 (1)ನೇ ವಿಧಿಯನ್ನು ಪ್ರಶ್ನಿಸಿ, ಹಿಂದಿ ಭಾಷೆಯಲ್ಲೂ ಕಲಾಪ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ. ಈ ಬಗ್ಗೆ ‘ಲೈವ್ ಲಾ’ ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಹಾಗೂ ಮನೋಜ್ ಮಿಶ್ರಾ ಅರ್ಜಿಯ ವಿಚಾರಣೆ ನಡೆಸಿದರು. ‘ಹಿಂದಿ ಭಾಷೆಗೆ ಏಕೆ ಮಾತ್ರ ವಿಶೇಷ ಪ್ರಾಮುಖ್ಯತೆ’ ಎಂದು ಅರ್ಜಿದಾರರಿಗೆ ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಅಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ ವೈವಿಧ್ಯತೆ ಇರುವ ದೇಶದ ಎಲ್ಲಾ ರಾಜ್ಯಗಳ ಅರ್ಜಿಗಳೂ ಸಲ್ಲಿಕೆಯಾಗುತ್ತವೆ. ಹಾಗಾದರೆ ನಾವು ಸಂವಿಧಾನದಲ್ಲಿ ಮಾನ್ಯತೆ ಲಭಿಸಿರುವ ಎಲ್ಲಾ ಭಾಷೆಗಳಲ್ಲೂ ಕಲಾಪ ನಡೆಸಬೇಕಾ? ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ

RELATED ARTICLES

Related Articles

TRENDING ARTICLES