Monday, December 23, 2024

ತಲೆ ಕತ್ತರಿಸಿ ಭೀಕರವಾಗಿ ಕೊಲೆ : ಸ್ಥಳಕ್ಕೆ ಪೋಲಿಸ್​ ಆಯುಕ್ತರು ಭೇಟಿ ನೀಡಿ ಪರಿಶೀಲನೆ

ಕಲಬುರಗಿ : ಜಿಲ್ಲೆಯೆ ಬಬಲಾದ ಗ್ರಾಮದ ಹೊರವಲಯದಲ್ಲಿ ರುಂಡವಿಲ್ಲದ ಮುಂಡ ಪತ್ತೆಯಾಗಿದ್ದು. ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವವನ್ನು ಬಿಸಾಡಿ ಹೋಗಿದ್ದಾರೆ. ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಪೋಲಿಸರು ಮಾಹಿತಿ ನೀಡಿದ್ದು. ಕಲಬುರಗಿ ಸಬ್​ ಅರ್ಬನ್​​ ಪೋಲಿಸ್​ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೃತ್ಯ ನಡೆದಿದ್ದು. ಬರ್ಬರವಾಗಿ ಕೊಲೆ ಮಾಡಿ ನಂತರ ರುಂಡ-ಮುಂಡವನ್ನು ಬೇರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಲಬುರಗಿ ನಗರ ಪೋಲಿಸ್​ ಆಯುಕ್ತ ಶರಣಪ್ಪ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಕೊಲೆಯಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಆದರೆ ರಾತ್ರಿಯೆಲ್ಲಾ ಕುಡಿದು ಪಾರ್ಟಿ ಮಾಡಿ ನಂತರ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES