Friday, December 27, 2024

ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ : ತನಿಖೆಗೆ ಆಗ್ರಹಿಸಿದ ಕುಟುಂಬಸ್ಥರು

ಬೆಂಗಳೂರು : ಕಳೆದ ತಿಂಗಳು ಅಕ್ಟೋಬರ್​​ 25ರಂದು HAL ಸಂಚಾರಿ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದನು. ಇದೀಗ ಈ ಪ್ರಕರಣಕ್ಕೆ ತಿರುವು ದೊರೆತಿದ್ದು ಯುವಕ ತನ್ನನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ದರೋಡೆಕೋರರಿಂದ ತಪ್ಪಿಸಿಕೊಳ್ಳಲು  ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.

ವೃತ್ತಿಯಲ್ಲಿ ಇಂಟೀರಿಯರ್​ ಡಿಸೈನರ್​ ಆಗಿದ್ದ ರೋಹನ್​. ರಾಮಮೂರ್ತಿನಗರದಲ್ಲಿ ಕುಟುಂಬದೊಂದಿಗೆ  ವಾಸವಾಗಿದ್ದನು. ಆದರೆ ಕಳೆದ ಅಕ್ಟೋಬರ್​ 25 ರಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ರೋಹನ್ ತನ್ನ ರಾಯಲ್ ಎನ್ಫೀಲ್ಡ್ ಬೈಕ್​ನಲ್ಲಿ ಸೇಲಂ ಬ್ರಿಡ್ಜ್​ ಬಳಿ ಹೋಗುವಾಗ ಕಾಮಧೇನು ಸ್ವಸ್ಥ ಕೇಂದ್ರ ಮುಂಭಾಗದ ಡೆಡ್ ಎಂಡ್​ನಲ್ಲಿನ ಕಬ್ಬಿಣದ ಸರಳಿಗೆ ಬೈಕ್​ ಡಿಕ್ಕಿಯಾಗಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದನು. ಪೋಲಿಸರು ಇದನ್ನು ಅಜಾಗರೂಕತೆಯಿಂದ ಸಂಭವಿಸಿದ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಬಿಟ್ಟಿದ್ದರು.

ಆದರೆ ಘಟನೆಯ ಬಗ್ಗೆ ಕುಟುಂಬ್ಥರು ಅನುಮಾನ ವ್ಯಕ್ತಪಡಿಸಿದ್ದು. ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದ ಕುಟುಂಬಸ್ಥರು ರೋಹನ್​ನನ್ನು ಹಿಂದಿನಿಂದ ರಾಬರ್ಸ್​ಗಳು ಹಿಂಬಾಲಿಸುತ್ತಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತನಿಖೆಗೆ ಆಗ್ರಹಸಿದ್ದಾರೆ. ರೋಹನ್​​ನನ್ನು ಹಿಂದಿನಿಂದ ಮೂವರು ಹಿಂಬಾಲಿಸಿದ್ದು ಅಪಘಾತ ಸಂಭವಿಸುತ್ತಿದ್ದಂತೆ ಆ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಕುಟುಂಬ್ಥರು ತನಿಖೆಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES