Wednesday, January 22, 2025

ವಿದ್ಯಾರ್ಥಿಗಳಿಗಾಗಿ ಪುಸ್ತಕ ಖರೀದಿಸಿದ್ದ ಗುರುಪ್ರಸಾದ್ ಮೇಲೆ ಬಿದ್ದಿತ್ತು ಕೇಸ್​​

ಬೆಂಗಳೂರು : ಗುರಪ್ರಸಾದ್​ ಹೇಗೆ ಒಬ್ಬ ನಿರ್ದೇಶಕ, ನಟ, ಬರಹಗಾರರಾಗಿದ್ದರೊ ಅದೇ ರೀತಿ ಅವರು ಒಬ್ಬ ಒಳ್ಳೆಯ ಶಿಕ್ಷಕರಾಗಿದ್ದರು. ಅವರು ತಮ್ಮ ಬಳಿ ಬರುವ ವಿಧ್ಯಾರ್ಥಿಗಳಿಗೆ ನಿರ್ದೇಶನ ಮತ್ತು ಬರಹದ ಬಗ್ಗೆ ಹೇಳಿಕೊಡುತ್ತಿದ್ದರು. ವಿಧ್ಯಾರ್ಥಿಗಳಿಗಾಗಿ ಅವರು ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕ ಖರೀದಿಸಿ ಅದಕ್ಕೆ ಹಣ ಕೊಡದ ಹಿನ್ನಲೆ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು.

ಜಯನಗರದ ಕನ್ನಡ ಸಾಹಿತ್ಯ ಹಾಗೂ ಸಿನಿಮಾ ಸಂಬಂಧಿತ ಪುಸ್ತಕ ಹಾಗೂ ಸಿಡಿ ಗಳ ಸಂಗ್ರಹವಿರುವ ಪುಸ್ತಕ ಮಳಿಗೆ ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ 2019ರಲ್ಲಿ ಪುಸ್ತಕ ಮಳಿಗೆಗೆ ತೆರಳಿದ್ದ ನಿರ್ದೇಶಕ ಗುರುಪ್ರಸಾದ್ ತಾನು ತರಬೇತಿ ನೀಡುವ ವಿದ್ಯಾರ್ಥಿಗಳು ಓದಲು ಬೇಕಾದ ನೂರು ಪುಸ್ತಕಗಳು ಬೇಕು ರಿಯಾಯಿತಿ ದರದಲ್ಲಿ ಕೊಡಿ ಎಂದು ಕೇಳಿದ್ದರು.

ಇದಕ್ಕೆ ಒಪ್ಪಿದ ಮಳಿಗೆಯ ಮಾಲೀಕ 75 ಪುಸ್ತಕಗಳ ಐದು ಸೆಟ್​ಗಳನ್ನು ನೀಡಿದ್ದರು. ಈ ಪುಸ್ತಕಗಳಿಗೆ ರಿಯಾಯಿತಿ ಕಳೆದು ಒಂದು ಸೆಟ್ ಗೆ 13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕಿತ್ತು. ಆದರೆ ಪುಸ್ತಕ ಮಳಿಗೆಯಿಂದ ಪುಸ್ತಕ‌ ಹಾಗೂ ಸಿನಿಮಾ ಸಂಬಂಧಿತ ಸಿಡಿಗಳನ್ನು ಖರೀದಿಸಿದ ಗುರುಪ್ರಸಾದ್​ ಹಣ ನೀಡದೆನ ಸತಾತಿಸುತ್ತಿದ್ದರು, ಪೋನ್​ ಸ್ವೀಕರಿಸುತ್ತಿಲ್ಲ ಮತ್ತು ತಮ್ಮ ವಿಳಾಸವನ್ನು ಬದಲಾಯಿಸಿದ್ದಾರೆ ಎಂದು ಪುಸ್ತಕ ಮಳಿಗೆಯ ಮಾಲೀಕ ಲಕ್ಷ್ಮಿಕಾಂತ್​ ಪೋಲಿಸರಿಗೆ ದೂರು ನೀಡಿದ್ದರು.

RELATED ARTICLES

Related Articles

TRENDING ARTICLES