Wednesday, November 6, 2024

ಉಗ್ರರನ್ನು ಕೊಲ್ಲಬಾರದು ಎಂದು ಹೇಳಿದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಸೆರೆಹಿಡಿಯಲಾದ ಭಯೋತ್ಪಾದಕರನ್ನು ವಿಚಾರಣೆ ಮಾಡುವುದರಿಂದ ಈ ದಾಳಿಗಳನ್ನು ಸಂಘಟಿಸುವ ವಿಶಾಲ ಜಾಲಗಳ ಬಗ್ಗೆ ಪ್ರಮುಖ ಮಾಹಿತಿ ಸಿಗಬಹುದು ಎಂದು ಒತ್ತಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಾದ್ಯಂತ ಇತ್ತೀಚೆಗೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್‌ಗಳನ್ನು ಬಯಲಿಗೆಳೆಯಲು ಭಯೋತ್ಪಾದಕರನ್ನು ಕೊಲ್ಲುವ ಬದಲು ಸೆರೆಹಿಡಿಯಬೇಕು ಎಂದು ಸಲಹೆ ನೀಡುವ ಮೂಲಕ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಶನಿವಾರ ರಾಜಕೀಯ ವಿವಾದವನ್ನು ಎಬ್ಬಿಸಿದ್ದಾರೆ.

ಫಾರೂಕ್​​ ಅಬ್ದುಲ್ಲಾ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು. ಬಿಜೆಪಿ ನಾಯಕ ಫಾರೂಕ್​​ ಅಬ್ದುಲ್ಲ ಕೇವಲ ತಮ್ಮ ಕುಟುಂಬ, ತಮ್ಮ ಮತ ಬ್ಯಾಂಕ್​​ಗಳನ್ನು ಉಳಿಸಿಕೊಳ್ಳಲು ಇಂತಹ ಹೇಳಕೆ ನೀಡುತ್ತಾರೆ. ಅವರಿಗೆ ಅವರ ಕುಟುಂಬ ಮಾತ್ರ ಮೊದಲ ಆದ್ಯತೆಯಾಗಿರುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

 

RELATED ARTICLES

Related Articles

TRENDING ARTICLES