Wednesday, January 22, 2025

ಸಿನಿಮಾ ಲೋಕದ ‘ಸ್ಪೆಷಲ್​ ಡೈರೆಕ್ಟರ್’​ ಗುರುಪ್ರಸಾದ್​ ಇನ್ನಿಲ್ಲ

ಬೆಂಗಳೂರು : ಗುರುಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಿರ್ದೇಶಕ, ನಿರ್ಮಾಪಕ,ನಟ ಮತ್ತು ಸಾಹಿತಿ. ತಮ್ಮ ನವಿರಾದ ಮತ್ತು ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಸಿದ್ಧಹಸ್ತರಾಗಿದ್ದ ಇವರು ನವೆಂಬರ್​ 02-1972ರಲ್ಲಿ ಕನಕಪುರದಲ್ಲಿ ಜನಿಸಿದರು.

ಗುರುಪ್ರಸಾದ್ ರಾಮಚಂದ್ರ ಶರ್ಮಾ 2006ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಈ ಚಿತ್ರ  ನವರಸ ನಾಯಕ ಜಗ್ಗೇಶ್‌ರ ನೂರನೇ ಚಿತ್ರವಾಗಿತ್ತು.  2009ರಲ್ಲಿ ಇದೇ ಜೋಡಿ ‘ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಾಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ‘ಡೈರೆಕ್ಟರ್ ಸ್ಪೆಷಲ್​’ ‘ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು.

ಇಂತಹ ಗುರುಪ್ರಸಾದ್​​ ಇತ್ತೀಚೆಗೆ ‘ರಂಗನಾಯಕ’ ಎಂಬ ಸಿನಿಮಾ ಮಾಡಿ ಕೈಸುಟ್ಟಿಕೊಂಡಿದ್ದರು. ಜಗ್ಗೇಶ್​ ನಟನೆಯ ಈ ಸಿನಿಮಾ ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ಅದರಂತೆಯೇ ಸಿನಿಮಾ ತಂಡ ಸಿನಿಮಾ ಬಗ್ಗೆ ಪ್ರಚಾರವನ್ನು ನೀಡಿತ್ತು ಆದರೆ, ಸಿನಿಮಾ ಸೋತ ಬಳಿಕ ನಿರ್ದೇಶಕ ಗುರುಪ್ರಸಾದ್​ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

RELATED ARTICLES

Related Articles

TRENDING ARTICLES