Monday, December 23, 2024

ಜಂಗಮ ರೇಣುಕಾಸ್ವಾಮಿಗೆ ದರ್ಶನ್​ ಕಾಲಲ್ಲಿ ಒದ್ದಿದ್ದಾನೆ ಅದಕ್ಕೆ ಕರ್ಮ ಸುತ್ತಿಕೊಂಡಿದೆ: ವಾಸ್ತು ತಜ್ಞ ಗುರೂಜಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​ ಆರೋಗ್ಯ ಸಮಸ್ಯೆಯಿಂದ ಜಾಮೀನು ಪಡೆದು ಹೊರಗೆ ಬಂದಿದ್ದು. ಇದೀಗ ಕೆಂಗೇರಿ ಬಳಿಯ ಬಿಜಿಎಸ್​​ ಆಸ್ಪತ್ರೆಯಲ್ಲಿ ದರ್ಶನ್​​ ಚಿಕಿತ್ಸೆ ಪಡೆಯುತ್ತಿದ್ದಾನೆ. ದರ್ಶನ್​ರನ್ನು ಪರೀಕ್ಷಿಸಿದ ವೈದ್ಯರು ದರ್ಶನ್​ ಎಡಗಾಲಿನ ಸ್ಪರ್ಶ ಶಕ್ತಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇದರ ಕುರಿತು ಬೆಂಗಳೂರಿನಲ್ಲಿ ವಾಸ್ತು ತಜ್ಞ ನಾರಯಣ ಶರ್ಮ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್​ ಕುರಿತು ಹೇಳಿರುವ ನಾರಯಣ ಶರ್ಮ ಗುರೂಜಿ ಕರ್ಮ ಅನ್ನೋದು ಯಾರನ್ನು ಬಿಡೋದಿಲ್ಲ,
ನಾವು ಮಾಡಿದ ಪಾಪವನ್ನು ನಾವೆ ಅನುಭವಿಸಬೇಕು ಎನ್ನುವುದಕ್ಕೆ ದರ್ಶನ್​ ಪ್ರಕರಣ ಉದಾಹರಣೆಯಾಗಿದೆ.
ದರ್ಶನ್​ಗೆ  ಕೇವಲ ರೇಣುಕಾ ಸ್ವಾಮಿ ಕೊಲೆಯಿಂದ ಮಾತ್ರ ಸಂಕಷ್ಟ ಬಂದಿಲ್ಲ, ಅವರು ಚಿಕ್ಕ ವಯಸ್ಸಿನಲ್ಲಿ ಅಂಗ ವಿಕಲನಿಗೆ ತೊಂದರೆ ನೀಡಿದ್ದಾರೆ. ಕೇವಲ ರೇಣುಕಸ್ವಾಮಿ ಕೊಲೆ ಮಾತ್ರವಲ್ಲದೆ ದರ್ಶನ್​ ಸುಮಾರು ಜನರಿಗೆ ತೊಂದರೆ ಕೊಟ್ಟಿದ್ದಾನೆ. ಅದರಲ್ಲೂ ಜಂಗಮ ಸಮುದಾಯಕ್ಕೆ ಸೇರಿದ ರೇಣುಕಾಸ್ವಾಮಿಗೆ ಕಾಲಲ್ಲಿ ಒದ್ದಿದ್ದಾನೆ  ಅದಕ್ಕೆ ಕರ್ಮ ಸುತ್ತಿಕೊಂಡಿದೆ ಎಂದು ವಾಸ್ತು ತಜ್ಞ ನಾರಾಯಣ ಗುರೂಜಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES