Wednesday, January 22, 2025

ರಾಜ್ಯೋತ್ಸವದ ದಿನ ಕರಾಳ ದಿನ ಆಚರಣೆ: 1500 MES ಪುಂಡರ ಮೇಲೆ ಕೇಸ್​

ಬೆಳಗಾವಿ : ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ್​ ಕರಾಳ ದಿನಾಚರಣೆ ಆಚರಣೆ ಮಾಡಿದ ಹಿನ್ನಲೆಯಲ್ಲಿ
ನಾಡದ್ರೋಹಿ ಎಂಇಎಸ ಪುಂಡರ ಮೇಲೆ ಪೋಲಿಸರು ಪ್ರಕರಣ ದಾಖಲಿಸಿದ್ದು. 46 ಜನ ಎಂಇಎಸ್​ ಮುಖಂಡರು ಸೇರಿ 1500 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ನವೆಂಬರ್ 1ರಂದು ಜಿಲ್ಲಾಡಳಿತ ಅನುಮತಿ ಕೊಡದಿದ್ದರು ಕರಾಳ‌ ದಿನ ಎಂದು ಮೆರವಣಿಗೆ ಮಾಡಿದ್ದ ಎಂಇಎಸ್ ಪುಂಡರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು. ಕರ್ನಾಟಕದ ಸಾರ್ವಭೌಮತ್ವ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಪುಂಡರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು. ಈ ಪುಂಡರು ನವೆಂಬರ್​ 1ರಂದು ಬೆಳಗಾವಿ ನಗರದ ಧರ್ಮವೀರ ಸಂಭಾಜಿ ಮೈದಾನದಿಂದ ಮರಾಠಾ ಮಂದಿರದ ವರೆಗೆ ಕರಾಳ ದಿನ ಎಂದು ಮೆರವಣಿಗೆ ಮಾಡಿದ್ದರು.

ಪ್ರಕರಣ ಸಂಬಂಧ ಮಾಜಿ ಶಾಸಕ ಮನೋಹರ ಕಿಣೇಕರ, ಎಂಇಎಸ ಮುಖಂಡರಾದ ರಮಾಕಾಂತ ಕೊಂಡುಸ್ಕರ, ಶುಭಂ ಶಳಕೆ, ವಿಕಾಸ ಕಲಘಟಗಿ, ಶಿವಸೇನೆ ಮುಖಂಡ ಪ್ರಕಾಶ ಮರಗಾಳೆ ಸೇರಿ 46 ಮುಖಂಡರ ಮೇಲೆ ಕೇಸ್ ದಾಖಲು ಮಾಡಲಾಗಿದ್ದು.ಸಾರ್ವಜನಿಕ ಶಾಂತಿ ಭಂಗ, ನಗರದಲ್ಲಿ ದೊಂಬಿ ಎಬ್ಬಿಸಲು ಪ್ರಚೋದನೆ, ಅಕ್ರಮವಾಗಿ ಕೂಟ ಸೇರಿ ಸಭೆ ನಡೆಸಿದಕ್ಕೆ ಕೇಸ್ ದಾಖಲು ಮಾಡಲಾಗಿದೆ. ಬಿಎನ್ಎಸ್ ಕಾಯ್ದೆಯಡಿ ಸಹ ಕಲಂ 189(2),192,292,285,190 ಕಲಂ ಅಡಿ ಕೇಸ್ ದಾಖಲಾಗಿದ್ದು ಪೋಲಿಸರಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES