Wednesday, January 22, 2025

ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ : ಮತ್ತೆ ಮುಂದುವರಿದ MES ಪುಂಡಾಟ

ಬೆಳಗಾವಿ : ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಳೆಗಟ್ಟಿದ್ದು. ಗಡಿಜಿಲ್ಲೆ ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೆ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ರಾತ್ರಿಯಿಂದಲೇ ಸಂಭ್ರಮಾಚರಣೆ ಕಳೆಗಟ್ಟಿದ್ದು. ಕನ್ನಡ ಪರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಅದ್ದೂರಿಯಾಗಿ ರಾತ್ಯೋತ್ಸವವನ್ನು ಆಚರಿಸಿದರು.

ರಾಜ್ಯೋತ್ಸವದ ನಿಮಿತ್ತ  ಕೇಕ್​ಕಟ್ ಮಾಡಿ ಕನ್ನಡಪರ ಜಯಘೋಷಗಳನ್ನು ಘೋಷಿಸಿದ ಕನ್ನಡ ಕಾರ್ಯಕರ್ತರು ಕನ್ನಡ ಹಾಡುಗಳಿಗೆ  ಕುಣಿದು ಕುಪ್ಪಳಿಸಿದರು. ಬೆಳಗಾವಿಯ ಚೆನ್ನಮ್ಮ ವೃತ್ತದ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಿದ್ದು ಬೆಳಗಾವಿ ನಗರ  ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇಂದು ಬೆಳಿಗ್ಗೆ ಮೆರವಣಿಗೆ ನಡೆಯಲಿದ್ದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೋಳಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಮುಂದುವರಿದ MES ಪುಂಡಾಟ 

ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು. ಇದಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸನಿಂದ ಕರಾಳ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಕರಾಳ ದಿನ ಆಚರಣೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದೆ ಇದ್ದರು ಎಂಇಎಸ್​​ ಪುಂಡರಿಂದ ಮೆರವಣಿಗೆ ನಡೆಯುತ್ತಿದ್ದು. ಕರ್ನಾಟಕದ 865 ಪ್ರದೇಶಗಳನ್ನು ಮಹರಾಷ್ಟ್ರಗೆ ಸೇರಿಸಬೇಕು ಎಂದು ಅಗ್ರಹಿಸಿ ಈ ಮೆರವಣಿಗೆ ಮಾಡುತ್ತಿದ್ದಾರೆ.

ಬೆಳಗಾವಿಯ ಸಂಭಾಜೀ ಮೈದಾನದಿಂದ ಕರಾಳ ದಿನದ ಮೆರವಣಿಗೆ ಆರಂಭವಾಗಿದ್ದು. ಕಪ್ಪು ಪಟ್ಟಿ ಧರಿಸಿ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ಎಂಇಎಸ್​​ ಕಾರ್ಯಕರ್ತರಿಂದ ಮಹರಾಷ್ಟ್ರ ಪರ ಘೋಷಣೆಗಳನ್ನು ಕೂಗುತ್ತಿದ್ದು ಮೆರವಣಿಗೆಗೆ ಪೋಲಿಸರು ಬಿಗಿಭದ್ರತೆಯನ್ನು ಒದಗಿಸಿದ್ದಾರೆ. ಕರಾಳ ದಿನದ ಮೆರವಣಿಗೆ ನಡೆಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು.ಇದನ್ನು ವಿರೋಧಿಸಿ ಮೆರವಣಿಗೆ ಮಾಡಲಾಗುತ್ತಿದೆ.

RELATED ARTICLES

Related Articles

TRENDING ARTICLES