Monday, December 23, 2024

ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ನಟ ದರ್ಶನ್​ : ಬಿಜಿಎಸ್​ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​ ಮೆಡಿಕಲ್​ ಗ್ರೌಂಡ್ಸ್​ ಮಲೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್​ ಇಂದು ಕೆಂಗೇರಿ ಬಳಿಯ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದು. ವೈದ್ಯರು ವಿವಿಧ ಪರೀಕ್ಷೆಗಳನ್ನು ಮಾಡಿದ್ದು. ಇದರ ಕುರಿತು ಬಿಜಿಎಸ್​​ ಆಸ್ಪತ್ರೆ ವೈದ್ಯ ನವೀನ್​ ಅಪ್ಪಾಜಿ ಗೌಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ವೈದ್ಯ ನವೀನ್ ಅಪ್ಪಾಜಿ ಗೌಡ ಹೇಳಿಕೆ ನೀಡಿದ್ದು ದರ್ಶನ್​ ಇಂದು ಬೆನ್ನು ನೋವಿನಿಂದ ಆಸ್ಪತ್ರೆಗೆ ಆಡ್ಮಿಟ್​ ಆಗಿದ್ದಾರೆ. ಕಾಲಿನ ನೋವು ಕೂಡ ಹೆಚ್ಚಿದ್ದು ಎಲ್ಲಾ ರೀತಿಯ ಟೆಸ್ಟ್​ಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಸದ್ಯ ದರ್ಶನ್​  ಎಡಗಾಲಿನಲ್ಲಿ ಹೆಚ್ಚು ನೋವಿದ್ದು, ಎಡಗಾಲಿನ ಸ್ಪರ್ಷ ಶಕ್ತಿ ಕಡಿಮೆಯಾಗಿದೆ. ಅವರ ಎಡಗಾಲಿನಲ್ಲಿ ಸೆಳೆತವಿದೆ ಎಂದು ಹೇಳಿದ್ದರು.

ಮುಂದುವರಿದು ಮಾತನಾಡಿದ ಡಾಕ್ಟರ್​​ ನವೀನ್​ ಅಪ್ಪಾಜಿಗೌಡ  ಸದ್ಯ ದರ್ಶನ್​ಗೆ ರಕ್ತ ಪರೀಕ್ಷೆ,MRI ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಯನ್ನು ಮಾಡಲಾಗುತ್ತಿದ್ದು. ಇನ್ನು 48 ಗಂಟೆಗಳಲ್ಲಿ ವರದಿಯನ್ನು ನೀಡಲಾಗುವುದು ಅಲ್ಲಿಯವರೆಗೆ ನಟ ದರ್ಶನ್​ ಆಸ್ಪತ್ರೆಗೆ ದಾಖಲಾಗಲಿದ್ದು. ವರದಿ ಬಂದ ಬಳಿಕ ದರ್ಶನ್​ ಸಮಸ್ಯೆಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಲಾಗುವುದು ಎಂದು ಹೇಳಿದರು.

RELATED ARTICLES

Related Articles

TRENDING ARTICLES