ಹಾವೇರಿ : ಜಿಲ್ಲೆಗೂ ಸವಣೂರು ತಾಲೂಕು ಕಡಕೋಳ ಗ್ರಾಮದಲ್ಲಿ ವಕ್ಪ್ ಗಲಾಟೆ ನಡೆದಿದ್ದು.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಕ್ಪ್ ಆಸ್ತಿಗಳನ್ನು ವಕ್ಪ್ ಸಂಸ್ಥೆ ಹೆಸರಿನಲ್ಲಿ ಖಾತೆಯಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ವಕ್ಪ್ ಆಸ್ತಿಗೆ ಸೇರಿದ ಖಾತೆ ದಾಖಲೆಗಳಲ್ಲಿ ವಕ್ಪ್ ಆಸ್ತಿಯನ್ನು ಪರಭಾರೆ ಮಾಡುವುದನ್ನು ನಿಷೇಧಿಸಿದೆ ಎಂದು ಲಾಕ್ ಮಾಡಲು ಪಿಡಿಒಗಳಿಗೆ ಕಳೆದ ಸೆಪ್ಟೆಂಬರ್ 27 ರಂದೇ ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ಅವರಿಂದ ಆದೇಶ ನೀಡಲಾಗಿತ್ತು. ಈ ಆದೇಶವನ್ನು ವಕ್ಬ್ ಸಚಿವ ಜಮೀರ್ ಅಹ್ಮದ್ ಕಳೆದ ಸೆಪ್ಟೆಂಬರ್ 3 ರಂದು ನಡೆದ ಸಭೆಯಲ್ಲಿ ನೀಡಿದ ಸೂಚನೆ ನೀಡಿದ್ದರು.ಸೂಚನೆ ಮೇರೆಗೆ ಸಿಇಒ ಅಕ್ಷಯ್ ಕುಮಾರ್ ವಕ್ಫ್ ಆಸ್ತಿಯನ್ನು ಲಾಕ್ಮಾಡಿದ್ದರು.
ಇದರಿಂದ ಗ್ರಾಮಸ್ಥರು ತಾವು ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂದು ಆತಂಕದಿಂದ ಕಡಕೋಳ ಗ್ರಾಮದಲ್ಲಿಗಲಾಟೆಯಾಗಿದ್ದು ವಿವಾದಿತ ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಸಮುದಾಯದ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಕಡಕೋಳ ಗ್ರಾಮದ ಕೆಲ ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪು ಮುಸ್ಲಿಂ ಮುಖಂಡ ಮಹಮದ್ ರಫಿ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆ ಮುಂದಿರೋ ಬೈಕ್ ಒಡೆದು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಹಾವೇರಿ ಡಿಸಿ ವಿಜಯ್ ಮಹಾಂತೇಶ್ , ಎಸ್ ಪಿ ಅಂಶು ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು ಯಾವುದೇ ಅಹಿತಕರ ಘಟನೆಯಾಗದಂತೆ ಕ್ರಮಕೈಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಡಿ.ಸಿ ಮತ್ತು ಎಸ್ಪಿ ಗ್ರಾಮಸ್ಥರರ ಮನವೊಲಿಸಿದ್ದು. ಗಲಾಟೆಯನ್ನು ತಣ್ಣಗೆ ಮಾಡಿದ್ದಾರೆ. ಗಲಾಟೆ ಯಾರು ಮಾಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಪೋಲಿಸರು ಕಿಡಿಗೇಡಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 32 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ದೊರೆತಿದೆ.