Thursday, October 31, 2024

ಪುಡಿರೌಡಿಗಳ ಅಟ್ಟಹಾಸ : 5 ವರ್ಷದ ಮಗುವಿನ ತಲೆ ಹೊಡೆದ ಕಿರಾತಕರು

ಆನೇಕಲ್ : ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್​ ರೇಜ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಇದೀಗ ಅನೇಕಲ್​ ಬಳಿಯಲ್ಲಿ ಕಾರನ್ನು ಫಾಲೋ ಮಾಡಿಕೊಂಡು ಬಂದ ಇಬ್ಬರು ಕಾರಿನ ಗಾಜು ಹೊಡೆದು 5 ವರ್ಷದ ಮಗುವಿನ ತಲೆಗೆ ಹೊಡೆದು ಗಾಯ ಮಾಡಿದ್ದಾರೆ.

ಬೆಂಗಳೂರಿನ ಅನೇಕಲ್​ ಬಳಿಯ, ಕಸವನಹಳ್ಳಿ ಅಮೃತ ಕಾಲೇಜು ಬಳಿ ನಡೆದ ಘಟನೆ ನಡೆದಿದ್ದು. ಅಕ್ಟೋಬರ್ 30 ರಂದು ರಾತ್ರಿ 9.30 ಕ್ಕೆ ಕೃತ್ಯ ನಡೆದಿದೆ. ದಂಪತಿಗಳು ಮತ್ತು ಇಬ್ಬರು ಮಕ್ಕಳು ದೀಪಾವಳಿ ಶಾಪಿಂಗ್ ಗೆ ಮುಗಿಸಿ ಮನೆಗೆ ತೆರಳುವಾಗಿ ಬೈಕ್ ನಲ್ಲಿ ಫಾಲೊ ಮಾಡಿದ್ದ ಇಬ್ಬರು ಯುವಕರು ಕಾರಿಗೆ ಅಡ್ಡ ಹಾಕಿ ಗ್ಲಾಸ್ ಇಳಿಸುವಂತೆ ಆವಾಜ್ ಹಾಕಿದ್ದಾರೆ.  ಆದರೆ ಹೆದರಿ ಕಾರ್ ಗ್ಲಾಸ್ ತೆರೆಯದ ಹಿನ್ನಲೆ ಕಿಡಿಗೇಡಿಗಳು ಕಾರಿಗೆ ಕಲ್ಲನ್ನು ಎಸೆದಿದ್ದಾರೆ. ಇದರಿಂದಾಗಿ ಕಾರಿನ ಗಾಜು ಹೊಡೆದು ಹಿಂದಿನ ಸೀಟಿನಲ್ಲಿ ಕುಳಿತಿದ್ದ 5 ವರ್ಷದ ಮಗುವಿನ ತಲೆಗೆ ಗಾಯವಾಗಿದೆ.

ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಗುವಿನ ತಲೆಗೆ ಗಾಯವಾಗುತ್ತಿದ್ದಂತೆ ಮಗು ಚೀರಾಡಿದ್ದು. ಮಗುವಿನ ತಲೆ ಹೊಡೆದು ಕಾರಿನಲ್ಲೆಲ್ಲಾ ರಕ್ತ ಹರಿದಿದೆ. ತಕ್ಷಣವೇ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು. ವೈದ್ಯರು ಮಗುವಿನ ತಲೆಗೆ 3 ಹೊಲಿಗೆ ಹಾಕಿದ್ದಾರೆ ಎಂದು ಮಾಹಿತಿ ದೊರೆತಿದೆ. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಪೋಲಿಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES