ಈ ಬಾರಿಯ ಐಪಿಎಲ್ಗೆ ಸಿದ್ದತೆಗಳು ಆರಂಭವಾಗಿದ್ದು. ಆರ್ಸಿಬಿ ತಂಡ ಕೇವಲ ಮೂರು ಜನರನ್ನು ಉಳಿಸಿಕೊಂಡು ಉಳಿದ ಎಲ್ಲಾ ಆಟಗಾರರಿಗೆ ಗೇಟ್ಪಾಸ್ ನೀಡಿದೆ.
ಬಿಸಿಸಿಐ ನೀಡಿರುವ ಗಡುವಿನ ಒಳಗೆ ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆರ್ಸಿಬಿ ಹರಾಜಿಗೂ ಮುನ್ನ ತಂಡದಲ್ಲಿ ಕೆಲವೆ ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅವರುಗಳ ವಿವರ ಇಲ್ಲಿದೆ.
2025 ರ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಎಲ್ಲಾ ಐಪಿಎಲ್ ತಂಡಗಳಿಗೆ ತಮ್ಮ ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಲು ಅಕ್ಟೋಬರ್ 31 ರ ಗಡುವು ನೀಡಿತ್ತು. ಇದರ ಜೊತೆಗೆ ಪ್ರತಿ ತಂಡವು ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಇದರಲ್ಲಿ ಒಂದು ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಎಷ್ಟು ಆಟಗಾರರ ಮೇಲೆ ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಬಳಸಬೇಕು ಎಂಬುದನ್ನು ನಿರ್ಧರಿಸಲು ಫ್ರಾಂಚೈಸಿಗೆ ಅವಕಾಶ ನೀಡಲಾಗಿತ್ತು. ಆ ಪ್ರಕಾರ ಬಿಸಿಸಿಐ ನೀಡಿರುವ ಗಡುವಿನ ಒಳಗೆ ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆರ್ಸಿಬಿ ಹರಾಜಿಗೂ ಮುನ್ನ ತಂಡದಲ್ಲಿ ಕೇವಲ 3 ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅವರುಗಳ ವಿವರ ಇಲ್ಲಿದೆ.
ಈ ಬಾರಿಯ ಆರ್ಸಿಬಿ ತಂಡದ ನಾಯಾಕನಾಗುವ ನಿರೀಕ್ಷೆಯಾಲ್ಲಿರುವ ವಿರಾಟ್ಕೊಹ್ಲಿ(21cr), ಬ್ಯಾಟ್ಸ್ಮೆನ್ ರಜತ್ ಪಟಿದಾರ್(11cr) ಮತ್ತು ಬೌಲರ್ ಯಶ್ ದಯಾಳ್(5cr) ರನ್ನು ಉಳಿಸಿಕೊಂಡಿದ್ದು. ಇನ್ನು83 ಕೋಟಿ ಪರ್ಸ್ ಹೊಂದಿದ್ದು. ಈ ಹಣವನ್ನು ಬಳಸಿಕೊಂಡು ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಕೊಂಡುಕೊಳ್ಳುವ ಯೋಜನೆ ರೂಪಸಿದೆ.