Sunday, December 22, 2024

ಇಂದಿರಾಗಾಂಧಿ ಬದಲು ಸೋನಿಯಾ ಗಾಂಧಿಗೆ ಶ್ರದ್ದಾಂಜಲಿ ಅರ್ಪಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಇಂದು(ಅಕ್ಟೋಬರ್ 31) ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದಾರೆ.

ಇಂದಿರಾಗಾಂಧಿಯವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಭಾರತದ ಇಬ್ಬರು ಮಹಾನ್ ಚೇತನಗಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಖರ್ಗೆ, ಮಾತಿನ ಭರದಲ್ಲಿ ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಎನ್ನುವ ಬದಲು ಬಾಯ್ತಪ್ಪಿನಿಂದ ಸೋನಿಯಾ ಗಾಂಧಿ ಎಂದು ಎಂದಿದ್ದಾರೆ. ತಪ್ಪಿನ ಅರಿವಾಗಿ ಕೂಡಲೇ ಸಾರಿ ಕೇಳಿ, ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಎಂದರು.

ಮಾತು ಮುಂದುವರಿಸಿದ ಖರ್ಗೆ, ಶ್ರೀಮತಿ ಇಂದಿರಾಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಇಬ್ಬರು ಮಹಾಪುರುಷರು ನಮಗೆ ಪ್ರೇರಣೆ. ಮಹಾಚೇತನಗಳಿಂದ ಪ್ರೇರಣೆ ಪಡೆಯಲು ನಾವಿಲ್ಲಿ ಸೇರಿದ್ದೇವೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಜವಾಹರಲಾಲ್ ಅವರ ಜೊತೆ ಗಟ್ಟಿಯಾಗಿ ನಿಂತ ನಾಯಕ. ಹೈದ್ರಾಬಾದ್ ಕರ್ನಾಟಕಕ್ಕೆ ಲೇಟ್ ಆಗಿ ನಮಗೆ ಸ್ವಾತಂತ್ರ್ಯ ಸಿಕ್ತು. ವಲ್ಲಭಭಾಯಿ ಪಟೇಲ್ ಅವರು ಒಗ್ಗೂಡಿಸುವುದಕ್ಕೆ ಪ್ರಯತ್ನ ಪಟ್ಟರು. ಆ ಒಗ್ಗಟ್ಟನ್ನ ಕಾಪಾಡುವುದಕ್ಕೆ ಇಂದಿರಾಗಾಂಧಿ, ಸೋನಿಯಾಗಾಂಧಿ , ರಾಹುಲ್ ಗಾಂಧಿ ಪ್ರಾಣ ಕೊಟ್ಟರು ಎನ್ನುವ ಮೂಲಕ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡರು. ಬಳಿಕ ಸಾವರಿಸಿಕೊಂಡ ಖರ್ಗೆ, ದಿನ ಹೇಳಿ ಹೇಳಿ ಈ ರೀತಿ ಆಗುತ್ತಿದೆ. ಮೀಡಿಯಾದವರು ಇದನ್ನ ನೀವು ಹೈಲೈಟ್ ಮಾಡಬೇಡಿ ಎಂದು ಮನವಿ ಮಾಡಿದರು.

RELATED ARTICLES

Related Articles

TRENDING ARTICLES