Sunday, December 22, 2024

ಪಟಾಕಿ ಸಿಡಿಸುವಾಗ ಇರಲಿ ಎಚ್ಚರ: ಕೆಳಗಿನ ಮುಜಾಗ್ರತೆಯನ್ನು ತೆಗೆದುಕೊಂಡು ಆಚರಿಸಿ ದೀಪಾವಳಿ

ಬೆಂಗಳೂರು :  ನಾಡಿನೆಲ್ಲೆಡೆ ದೀಪಾವಳಿಯ ಸಂಭ್ರಮ ಕಳೆಗಟ್ಟಿದ್ದು. ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರ ತುದಿ ಕಾಲಲ್ಲಿ ಕಾದಿದ್ದಾರೆ. ದೀಪಾವಳಿ ಎಂದರೆ ಪಟಾಕಿಗಳ ಹಬ್ಬ, ಪಟಾಕಿ ಸಿಡಿಸದೆ ಇದ್ದರೆ ದೀಪಾವಳಿಗೆ ಅರ್ಥವೇ ಇರುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಇಂತಹ ಪಟಾಕಿಗಳು ಕೆಲವೊಂದು ಬಾರಿ ಸಂಪೂರ್ಣ ಜೀವನವನ್ನೆ ಅಂಧಕಾರಕ್ಕೆ ತಳ್ಳುತ್ತವೆ ಆದ್ದರಿಂದ ಪಟಾಕಿ ಸಿಡಿಸಲು ಕೈಗೊಳ್ಳಾಬೇಕಾದ  ಮುನ್ನೆಚರಿಕ ಕ್ರಮಗಳನ್ನು ಈ ಕೆಳಗೆ ನೋಡೋಣ.

ಪಟಾಕಿ ಹಚ್ಚ ಬೇಕಾದರೇ ತೆಗೆದುಕೊಳ್ಳಬೇಕಾದ ಕ್ರಮಗಳು

  • ಪಟಾಕಿಗಳನ್ನು ಸಿಡಿಸುವಾಗ ಪಕ್ಕದಲ್ಲಿ ಒಂದು ಬಕೆಟ್ ನೀರನ್ನು ಅಥವಾ ಬೆಂಕಿ ನಂದಿಸುವ ಉಪಕರಣವನ್ನು ಇಟ್ಟುಕೊಳ್ಳಿ.
  • ಪಟಾಕಿಗಳನ್ನು ಹಚ್ಚಿದ ನಂತರ ಬೇಗನೆ ದೂರ ಸರಿಯಿರಿ
  • ಕಣ್ಣುಗಳನ್ನು ಪಟಾಕಿಯ ಕಿಡಿಗಳಿಂದ ಮತ್ತು ಸಿಡಿಯುವಿಕೆಗಳಿಂದ ರಕ್ಷಿಸಲು ಸುರಕ್ಷಿತಾ ಕನ್ನಡಕಗಳನ್ನು ಧರಿಸಿ
  • ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಪಕ್ಕದಲ್ಲಿ ನಿಂತು ಗಮನಿಸಿ, ಅವರಿಗೆ ಹೇಗೆ ಸಿಡಿಸಬೇಕೆಂದು ಹೇಳಿಕೊಡಿ.
  • ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಾದ ಒಣಗಿರುವ ಎಲೆಗಳು ಅಥವಾ ವಾಹನಗಳು ಇಲ್ಲದ ಸ್ಥಳವನ್ನು ಪಟಾಕಿ ಸಿಡಿಸಲು ಆರಿಸಿಕೊಳ್ಳಿ

ಪಟಾಕಿ ಸಿಡಿಸುವಾಗ ಮಾಡಬಾರದು

  • ವಿಫಲವಾದ/ಹತ್ತದಿರುವ ಪಟಾಕಿಗಳು, ಹೂವಿನ ಕುಂಡ, ಭೂಚಕ್ರ ಮುಂತಾದವುಗಳನ್ನು ಪುನಃ ಹೊತ್ತಿಸಬೇಡಿ, ಅವುಗಳನ್ನು ನೀರಿನಲ್ಲಿ ಎಸೆಯುವ ಮುನ್ನ 20 ನಿಮಿಷ ಕಾಯಿರಿ.
  • ಜನರು, ಪ್ರಾಣಿಗಳು ಅಥವಾ ವಾಹನಗಳ ಮೇಲೆ ಎಂದಿಗೂ ಪಟಾಕಿಗಳನ್ನು ಎಸೆಯಬೇಡಿ.
  • ಬಾಟಲಿಗಳು ಅಥವಾ ಮಡಕೆಗಳಂತಹ ವಸ್ತುಗಳನ್ನು ಪಟಾಕಿಗಳ ಮೇಲೆ ಮುಚ್ಚುವ ಮೂಲಕ ಪಟಾಕಿ ಸದ್ದನ್ನು ಹೆಚ್ಚಿಸಬೇಡಿ.
  • ಪಟಾಕಿ ಹಚ್ಚುವಾಗ ಕಾಂಟ್ಯಾಕ್ಟ್ ಲೆನ್ಸ್​ಗಳನ್ನು ಧರಿಸಬೇಡಿ, ಕನ್ನಡಕ ಧರಿಸಿಏಕಕಾಲದಲ್ಲಿ ಅನೇಕ ಪಟಾಕಿಗಳನ್ನು ಹಚ್ಚಬೇಡಿ.
  • ಪಟಾಕಿಗಳಿಂದ ಉಂಟಾದ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡಿ. ಸುಟ್ಟಗಾಯದ ಮೇಲೆ ತಂಪಾದ ನೀರನ್ನು ಸುರಿಯಿರಿ ಅಥವಾ ಆ ಪ್ರದೇಶವನ್ನು ಶುದ್ಧ ನೀರಿನಿಂದ ನಿಧಾನವಾಗಿ ತೊಳೆಯಿರಿ.
  • ಸ್ವಚ್ಛವಾದ, ಒಣ ಬಟ್ಟೆಯಿಂದ ಮುಚ್ಚಿ ಮತ್ತು ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಿರಿ

ಕಣ್ಣಿಗೆ ಕಿಡಿ ಹಾರಿದ್ರೆ ತೆಗೆದುಕೊಳ್ಳಬೇಕಾದ ಕ್ರಮ

  • ಕಣ್ಣುಗಳನ್ನು ಉಜ್ಜಬೇಡಿ
  • ಕನಿಷ್ಠ 15 ನಿಮಿಷಗಳ ಕಾಲ ಶುದ್ಧ ನೀರಿನಿಂದ ಕಣ್ಣನ್ನು ನಿಧಾನವಾಗಿ ತೊಳೆಯಿರಿ
  • ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ ಮತ್ತು ಸ್ವಯಂ-ಔಷಧಿಗಳನ್ನು ಬಳಸಬೇಡಿ

RELATED ARTICLES

Related Articles

TRENDING ARTICLES