ಕಲಬುರಗಿ : ಕಲುಷಿತ ನೀರು ಕುಡಿದು ಮಗು ಸಾವು ಆರೋಪ, ಹಲವರು ಅಸ್ವಸ್ಥವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಸೇಡಂ ತಾಲ್ಲೂಕಿನ ಹೂಡಾ (ಬಿ) ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ.
ಮಮತಾ ಹಣಮಂತ ಜೋಗುರ (5) ಮೃತ ಬಾಲಕಿ ಎಂದು ಗುರುತಿಸಿದ್ದು. ಹೂಡಾ ಬಿ ಗ್ರಾಮಕ್ಕೆ ಪೂರೈಕೆಯಾದ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಎಂದು ಶಂಕಿಸಲಾಗಿದೆ. ನೀರನ್ನು ಕುಡಿದು ಗ್ರಾಮದ ಹಲವು ಜನರು ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.
ಅಸ್ವಸ್ಥರಿಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಘಟನೆ ಸಂಬಂಧ ಕಲಬುರಗಿಯಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಕಲುಷಿತ ನೀರು ಕುಡಿದೇ ಮಗು ಸಾವನ್ನಪ್ಪಿದರ ಬಗ್ಗೆ ಮಾಹಿತಿ ಪಡೆಯುತ್ತೇನೆ, ಸದ್ಯ ವೈದ್ಯರು ಹೂಡಾ ಬಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಾನು ಕೂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.