Sunday, December 22, 2024

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ : ಆರೋಪಿಗಳು ಪೋಲಿಸರ ವಶ

ಮೈಸೂರು : ವರದಕ್ಷಿಣೆ ಎಂಬುದು ಈ ಸಮಾಜಕ್ಕೆ ಅಂಟಿರುವ ಒಂದು ಕಳಂಕವಾಗಿದ್ದು. ಇನ್ನು ಸಮಾಜದಲ್ಲಿ ವರದಕ್ಷಿಣೆಗಾಗಿ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ ಎಂದರೆ ನಮ್ಮ ಸಮಾಜ ಇನ್ನು ಈ ವರದಕ್ಷಿಣೆ ಎಂಬ ಕಳಂಕದಿಂದ ಹೊರಗೆ ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೂಡ್ಲುರು ಗ್ರಾಮದಲ್ಲಿ ಘಟನೆಯಾಗಿದ್ದು. ನಿತ್ಯ ನಿರ್ಮಲ (25) ಎಂಬ ಗೃಹಿಣಿ ಸಾವನ್ನಪ್ಪಿದ್ದಾರೆ. ಗೃಹಿಣಿಯ ಪೋಷಕರು ಪೋಲಿಸರಿಗೆ ಮಾಹಿತಿ ನೀಡಿದ್ದು. ನಿತ್ಯ ನಿರ್ಮಲ ಪತಿ ಕಿರಣ್ ಹಾಗೂ, ಅತ್ತೆ ವಿರುದ್ಧ ದೂರು ನೀಡಿದ್ದಾರೆ. ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ

ಕಳೆದ ಎರಡು ವರ್ಷದ ಹಿಂದೆ ಕಿರಣ್ ರನ್ನ ಮದುವೆಯಾಗಿದ್ದ ನಿರ್ಮಲ ಕೆಲವು ಕಾಲ ಸುಖ ಜೀವನ ನಡೆಸುತ್ತಿದ್ದರು. ಆದರೆ ನಂತರ ಪತಿ ಕಿರಣ್ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಮಾಹಿತಿ ದೊರೆತಿದೆ. ನಿರ್ಮಲ ಪೋಷಕರು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು. ನಿರ್ಮಲ ಪೋಷಕರಿಗು ಮಾಹಿತಿ ತಿಳಿಸಿದೆ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು ಎಂದು ಮಾಹಿತಿ ದೊರತಿದೆ.

ನಿರ್ಮಲ ಸಾವನ್ನಪ್ಪಿರುವ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಿರ್ಮಲ ಕುಟುಂಬಸ್ಥರು ಮತ್ತು ಕಿರಣ್​ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ ಎಂಬ ಮಾಹಿತಿ ದೊರೆತಿದೆ. ನಂತರ ನಿರ್ಮಲ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಕಿರಣ್ ಹಾಗೂ ಆತನ ತಾಯಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES