Monday, December 23, 2024

ಮಗನ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಜೈಲಿನಿಂದ ರಿಲೀಸ್​ ಆದ ದಾಸ ದರ್ಶನ್​

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​ಗೆ ಇಂದು ಜಾಮೀನು ದೊರಕಿ ಹೊರಗೆ ಬಂದಿದ್ದಾರೆ. ಅದರ ಜೊತೆಗೆ ನಾಳೆ ದರ್ಶನ್​ ಮಗ ವಿನೀಶ್​ ದರ್ಶನ್​ ಹುಟ್ಟುಹಬ್ಬವಿದ್ದು. ನಾಲ್ಕು ತಿಂಗಳಿಂದ ಮಗನಿಂದ ದೂರವಿದ್ದ ದರ್ಶನ್​ ತನ್ನ ಮಗನ ಹುಟ್ಟುಹಬ್ಬಕ್ಕೆ ಜೈಲಿನಿಂದ ರಿಲೀಸ್​ ಆಗಿದ್ದು ಮಗನ ಜೊತೆ ಹುಟ್ಟುಹಬ್ಬ ಆಚರಿಸಲು ಉತ್ಸುಕರಾಗಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಜೈಲು ಸೇರಿದ್ದ ದರ್ಶನ್​ನನ್ನು ಮಗ ವಿನೀಶ್​ ಕೇವಲ ಒಂದು ಬಾರಿ ಮಾತ್ರ ಬಂದು ನೋಡಿ ಹೋಗಿದ್ದರು. ತಂದೆಯ ವಾತ್ಸಲ್ಯದಿಂದ ದೂರವಾಗಿದ್ದ ಮಗನಿಗೆ ತನ್ನ ತಂದೆ ಜೈಲಿನಿಂದ ರಿಲೀಸ್​ ಆಗಿರುವುದು ಒಂದು ಖುಷಿಯಾಗಿದ್ದರೆ , ನಾಳೆ (ಅ.31) ತನ್ನ ಹುಟ್ಟುಹಬ್ಬವನ್ನು ತಂದೆಯ ಜೊತೆಗೆ ಆಚರಿಸಿಕೊಳ್ಳುತ್ತಿದ್ದೇನೆ ಎಂಬುದು ಮತ್ತೊಂದು ಸಂತೋಷವಾಗಿದೆ.

 

RELATED ARTICLES

Related Articles

TRENDING ARTICLES