ಬಳ್ಳಾರಿ : ಸುಮಾರು 4 ತಿಂಗಳಿನಂದ ಜೈಲಿನಲ್ಲಿದ್ದ ನಟ ದರ್ಶನ್ಗೆ ಕೊನೆಗೂ ಹೈಕೋರ್ಟ್ ಜಾಮೀನು ನೀಡಿದ್ದು. ಜಾಮೀನು ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನಟ ದರ್ಶನ್ ಜೈಲಿನಲ್ಲಿ ಖುಷಿಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ. ಜೈಲು ಸಿಬ್ಬಂದಿಗಳ ಮೂಲಕ ಮಾಹಿತಿ ಪಡೆದಿರೊ ನಟ ದರ್ಶನ್ ಜೈಲಿನಿಂದ ರಿಲೀಸ್ ಆಗುವ ಖುಷಿಯಲ್ಲಿದ್ದಾರೆ.
131 ದಿನಗಳ ಕಾಲ ಜೈಲಿನಲ್ಲಿ ನರಕಯಾತನೆ ಅನುಭವಿಸಿರುವ ನಟ ದರ್ಶನ್ಗೆ ಕೊನೆಗು ನ್ಯಾಯಾಲಯ 42 ದಿನಗಳ ಕಾಲ ಷರತ್ತುಬದ್ದ ಜಾಮೀನು ನೀಡಿ ರಿಲೀಫ್ ನೀಡಿದೆ. ನೆಚ್ಚಿನ ನಟನಿಗೆ ಜಾಮೀನು ಸಿಕ್ಕಿದೆ ಎಂದು ತಿಳಿಯುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಬಳ್ಳಾರಿ ಜೈಲಿನತ್ತ ಧಾವಿಸುತ್ತಿದ್ದು. ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಜೈಲಿನ ಮುಂದೆ ಬ್ಯಾರಿಕೇಡ್ಗಳನ್ನು ಹಾಕಿ ಸಿದ್ದತೆ ನಡೆಸುತ್ತಿದ್ದಾರೆ.
ನಾಳೆಯಿಂದ ದೀಪಾವಳಿ ಪ್ರಯುಕ್ತ ಸಾಲು ರಜೆಗಳು ಇರುವ ಹಿನ್ನಲೆ ಶತಾಯಗಥಾಯ ಇಂದೇ ದರ್ಶನ್ನನ್ಉ ಹೊರಗೆ ತರಬೇಕು ಎಂದು ದರ್ಶನ್ ಪರ ವಕೀಲರ ತಂಡ ಪ್ರಯತ್ನಿಸುತ್ತಿದ್ದು. ಕೋರ್ಟ್ನಿಂದ ಆದೇಶ ಪ್ರತಿಯನ್ನು ಬಳ್ಳಾರಿ ಜೈಲಿಗೆ ನೀಡಿ, ಜಾಮೀನು ಷರತ್ತುಗಳನ್ನು ಪೂರೈಸಿ ಇಂದೇ ಬಿಡುಗಡೆ ಮಾಡುತ್ತಾರೆ ಎಂದು ಮಾಹಿತಿ ದೊರೆತಿದೆ.