Wednesday, January 22, 2025

ಕೊನೆಗು ಬಳ್ಳಾರಿ ಜೈಲಿನಿಂದ ಹೊರಬಂದ ದಾಸ: ಕೈ ಹಿಡಿದ ಹೆಂಡತಿ ಕೊನೆಗು ಕೈಬಿಡಲಿಲ್ಲ

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​ ಕೊನೆಗು ಜೈಲಿನಿಂದ ಹೊರ ಬಂದಿದ್ದು. ಇಂದು ಬೆಳಿಗ್ಗೆ ಹೈಕೋರ್ಟ್​ ದರ್ಶನ್​ಗೆ ಷರತ್ತುಬದ್ದ ಜಾಮೀನು ನೀಡಿದ್ದ ಹಿನ್ನಲೆಯಲ್ಲಿ ಇಂದೇ ಎಲ್ಲಾ ಪ್ರಕ್ರಿಯೆಯನ್ನು ಮುಗಿಸಿ ಜೈಲಿನಿಂದ ದರ್ಶನ್​ನನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ.

ಜಾಮೀನು ನೀಡಿದ ಆದೇಶ ಹೊರಗೆ ಬರುತ್ತಿದ್ದಂತೆ ದರ್ಶನ್​ ಅಭಿಮಾನಿಗಳು ರಾಜ್ಯಾದ್ಯಂತ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ದರ್ಶನ್​ ಪತ್ನಿ ವಿಜಯ್​ಲಕ್ಷ್ಮಿ ಜೈಲಿಗೆ ಭೇಟಿ ನೀಡಿ ದರ್ಶನ್​ಗೆ ದೇವರ ಪ್ರಸಾದ ನೀಡಿದರು. ಅಲ್ಲಿಂದ ಹೊರಬಂದ ವಿಜಯ್​ಲಕ್ಷ್ಮಿ ನೇರವಾಗಿ ಬಳ್ಳಾರಿಯ ದುರ್ಗಮ್ಮ ದೇವರ ದರ್ಶನಕ್ಕೆ ಹೋಗಿ ದೇವರ ದರ್ಶನ ಪಡೆದರು.

ಜಾಮೀನು ಕೊಟ್ಟ ನಟ ಧನ್ವೀರ್​ 

ದರ್ಶನ್​ ಸ್ನೇಹಿತ ಮತ್ತು ಚಿತ್ರ ನಟ ಧನ್ವೀರ್​ ನ್ಯಾಯಾಲಯಕ್ಕೆ ಭೇಟಿ ನೀಡಿ ದರ್ಶನ್ ಪರವಾಗಿ ಜಾಮೀನು ನೀಡಿದರು. ಇವರ ಜೊತೆಗೆ ದರ್ಶನ್​ ತಮ್ಮ ದಿನಕರ್​ ತೂಗುದೀಪ್​ ಮತ್ತೊಬ್ಬ ಜಾಮೀನುದಾರರಾಗಿ ನ್ಯಾಯಲಯಕ್ಕೆ ಜಾಮೀನು ನೀಡಿದರು. ಇಂದೇ ಎಲ್ಲಾ ಷರತ್ತುಗಳನ್ನು ಪೂರೈಸಿದ ದರ್ಶನ್​ ಪರ ವಕೀಲರು ಜೈಲಾಧಿಕಾರಿಗಳಿಗೆ ಕೋರ್ಟ್​ನಿಂದ ನೀಡಿದ್ದ ಆದೇಶದ ಪ್ರತಿಯನ್ನು ನೀಡಿ ಜೈಲಿನಿಂದ ಹೊರಗೆ ಕರೆತಂದರು.

ಕೈಬಿಡಲಿಲ್ಲ ಕೈಹಿಡಿದ ಪತ್ನಿ 

ದರ್ಶನ್​ ಒಂದು ವೇಳೆ ಯಾರಿಗಾದರು ಧನ್ಯಾವಾದ ಅರ್ಪಿಸಬೇಕಾದರೆ ಅದು ಆತನ ಪತ್ನಿಗೆ ಎಂದು ಹೇಳಬಹುದು. ಭೂಮಿ ತೂಕದ ಹೆಣ್ಣು ಮಕ್ಕಳು ಮಾತ್ರ ಈ ರೀತಿ ತನ್ನ ಪತಿಗಾಗಿ ಹೋರಾಟ ನಡೆಸುತ್ತಾರೆ. ದರ್ಶನ್​ ಜೈಲಿಗೆ ಹೋದ ದಿನದಿಂದಲು ದರ್ಶನ್​ ಕೈ ಬಿಡದ ವಿಜಯ್​ಲಕ್ಷ್ಮಿ ಪ್ರತಿನಿತ್ಯ ದೇವರ ಬಳಿ ಬೇಡುತ್ತಾ, ವಕೀಲರನ್ನು ನೇಮಿಸಿ ಕೊನೆಗು ತನ್ನ ಪತಿಯನ್ನು ಜೈಲಿಗೆ ಕರೆತರುವಲ್ಲಿ ಸಫಲರಾಗಿದ್ದಾರೆ.

RELATED ARTICLES

Related Articles

TRENDING ARTICLES