ಅಯೋದ್ಯ : ರಾಮ ಮಂದಿರದಲ್ಲಿ ಈ ಬಾರಿ ಮೊದಲ ದೀಪಾವಳಿ ಆಚರಣೆ ಮಾಡಲಾಗುತ್ತಿದ್ದು. ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಟಾಪನೆ ಮಾಡಿದ ನಂತರ ಮೊದಲ ಬಾರಿಗೆ ದೀಪಾವಳಿ ಆಚರಣೆ ಮಾಡಲಾಗುತ್ತಿದೆ. ಒಟ್ಟು 25 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ನಿರ್ಮಿಸುತ್ತಿದ್ದಾರೆ.
ಸುಮಾರು 1100 ಜನ ಈ ಆರತಿಯಲ್ಲಿ ಭಾಗವಹಿಸುತ್ತಿದ್ದು. 25 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಕಳೆದ ಬಾರಿ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿಯಲು ಅಯೋಧ್ಯೆ ಸಿದ್ದತೆ ನಡೆಸಿದೆ. ಕಳೆದ ಬಾರಿ ಒಟ್ಟು 22 ಲಕ್ಷ 33 ಸಾವಿರ ದೀಪಗಳನ್ನು ಬೆಳಗಿಸಿ ಈ ದಾಖಲೆ ಮಾಡಲಾಗಿತ್ತು. ದೀಪೋತ್ಸವದ ಜೊತೆಗೆ ಡ್ರೋನ್ ಶೋ ಪ್ರದರ್ಶನವನ್ನು ಆಯೋಜಿಸಿದ್ದು. ಸಂಪೂರ್ಣ ಅಯೋಧ್ಯೆ ಶ್ರೀ ರಾಮನನ್ನು ಬರ ಮಾಡಿಕೊಳ್ಳಲು ಅದ್ದೂರಿ ಸಿದ್ದತೆಯನ್ನು ಮಾಡಿಕೊಂಡಿದೆ.
ಸಾವಿರಾರು ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಮ ಮಂದಿರದ ಬಳಿ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಘಾಟ್ ನಂ 10ರಲ್ಲಿ ಸುಮಾರು 6 ಲಕ್ಷದ 80 ಸಾವಿರ ದೀಪಗಳನ್ನು ಬಳಸಿಕೊಂಡು ಸ್ವಸ್ತಿಕ್ ಚಿತ್ರವನ್ನು ಬಿಡಿಸಿದ್ದು, ಇದು ಇಡೀ ಕಾರ್ಯಕ್ರಮದ ಆಕರ್ಷಣೆಯಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮತ್ತು ಭಕ್ತರು ಅಯೋಧ್ಯೆಗೆ ಆಗಮಿಸಿದ್ದು ಸಂಪೂರ್ಣ ಅಯೋಧ್ಯೆ ಜಗಮಗಿಸುತ್ತಿದೆ.