Sunday, December 22, 2024

ಮಗುವನ್ನು ಬಲಿಕೊಟ್ಟರೆ ನಿಧಿ ಸಿಗುತ್ತದೆ ಎಂದು ಪತ್ನಿಗೆ ಕಿರುಕುಳ : ಪತಿ ಸದ್ದಾಂ ವಿರುದ್ಧ ಪತ್ನಿ ಆಕ್ರೋಶ

ಬೆಂಗಳೂರು : ನಗರದಲ್ಲೊಬ್ಬ ಸೈಕೋಪಾತ್​ ನಿಧಿ ಸಿಗುತ್ತದೆ ಎಂದು ತನ್ನ ಸ್ವಂತ ಮಗುವನ್ನೇ ಬಲಿ ಕೊಡಲು ಹೊರಟ್ಟಿದ್ದಾನೆ. ಇದರಿಂದಾಗಿ ಪತಿ ವಿರುಧ್ದ ಸಿಡಿದೆದ್ದಿರು ಪತ್ನಿ ತನ್ನ ಗಂಡನ ವಿರುದ್ಧವೆ ಪೋಲಿಸ್​ ಕಮಿಷನರ್​ಗೆ ದೂರು ಕೊಡಲು ಮುಂದಾಗಿದ್ದಾಳೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಹಿಂದೂ ಧರ್ಮದ ಯುವತಿಯನ್ನ ಮದುವೆಯಾಗಿದ್ದ ಸದ್ದಾಂ, ತನ್ನನ್ನು ಹಿಂದೂ ಎಂದು ಯುವಕ, ನನ್ನ ಹೆಸರು ಆದಿಈಶ್ವರ್  ಎಂದು ಹೇಳಿಕೊಂಡು ಮದುವೆಯಾಗಿದ್ದನು. ಮದುವೆಯಾಗಿ ಪತ್ನಿ ಗರ್ಭಿಣಿಯಾದಾಗ ತಾನೊಬ್ಬ ಮುಸಲ್ಮಾನ್ ತನ್ನ ಹೆಸರು ಸದ್ದಾಂ ಎಂದು ಹೇಳಿದ್ದ ಸೈಕೋ ತನ್ನ ಪತ್ನಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯ ಹೆಸರನ್ನು ಬದಲಾವಣೆ ಮಾಡಿದ್ದನು.

ಇಷ್ಟೆಲ್ಲಾ ಆದರು ಪ್ರೀತಿಸಿ ಮದುವೆಯಾದ ಮೇಲೆ ಧರ್ಮ ಯಾವುದಾದರೇನು ಎಂದು ಪತ್ನಿಯೂ ಸುಮ್ಮನಾಗಿದ್ದಳು. ಆದರೆ ಗಂಡು ಮಗು ಜನನದ ನಂತರ ಕುಟ್ಟಿ ಸೈತಾನ್ ಪೂಜೆ ಮಾಡಬೇಕು.
ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗುವನ್ನ ಬಲಿ ಕೊಡಬೇಕು ಮಗುವನ್ನು ಬಲಿ ಕೊಟ್ರೆ ಸಮೃದ್ದಿ ಹೆಚ್ಚಾಗತ್ತೆ, ನಿಧಿ ಸಿಗತ್ತೆ ಎಂದು ಪತ್ನಿಗೆ ಕಿರುಕುಳ ನೀಡಿದ್ದನು. ತಡರಾತ್ರಿ ಎಂದು ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆ ಅಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು ಪತಿಯ ವರ್ತನೆ ಕಂಡು ಭಯಭೀತಳಾಗಿದ್ದ ಪತ್ನಿ ಪೋಲಿಸರಿಗೆ ದೂರು ನೀಡಿದ್ದರು.

ಸದ್ಯ ಗಂಡನಿಂದ ತಪ್ಪಿಸಿಕೊಂಡು ತುಮಕೂರಿನ ತವರು ಮನೆ ಸೇರಿರೋ ಮಹಿಳೆ ಪೋಲಿಸ್​ ಕಮಿಷನರ್​ಗೆ ದೂರು ನೀಡಿದ್ದಾರೆ. ಮಹಿಳೆಯ ತಾಯಿಗೂ ಜೀವಬೆದರಿಕೆ ಹಾಕಿರುವ ಆರೋಪಿ ಅವರಿಗು ಜೀವ ಬೆದರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೆ.ಆರ್.ಪುರಂ ಠಾಣೆಗೆ ಮಹಿಳೆ ದೂರು ನೀಡಿದ್ದು,ಯಾವುದೇ ಕ್ರಮವಾಗದ ಹಿನ್ನಲೆ ಪೊಲೀಸ್ ಆಯುಕ್ತ ದಯಾನಂದ್ ಗೆ ನೊಂದ ಪತ್ನಿಯಿಂದ ದೂರು ನೀಡಲಾಗಿದೆ.

RELATED ARTICLES

Related Articles

TRENDING ARTICLES