Sunday, December 22, 2024

12 ತಾಸುಗಳ ಕಾರ್ಯಚರಣೆಯ ನಂತರ ಸಾವುಗೆದ್ದು ಬಂದ ಯುವತಿ

 ತುಮಕೂರು : ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿಯನ್ನು ರಕ್ಷಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಬಂಡೆಯ ಮಧ್ಯೆ ಸಿಲುಕಿದ್ದ ಯುವತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ 12 ಗಂಟೆಗಳ ಕಾರ್ಯಚರಣೆಯ ನಂತರ ರಕ್ಷಣೆ ಮಾಡಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ. ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ತುಂಬಿ ಕೋಡಿ ಬಿದ್ದಿದ್ದ ಹಿನ್ನಲೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲು ಜಾರಿ ಬಿದ್ದು ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡಿದ್ದಳು. ರಾತ್ರಿಯಲ್ಲಾ ಕಲ್ಲಿನ ಪೊಟರೆಯಲ್ಲಿಯೇ ಇದ್ದ ಯುವತಿಯನ್ನು ಇಂದು ರಕ್ಷಣೆ ಮಾಡಿ ಮೇಲೆ ಕರೆತಂದಿದ್ದಾರೆ.

ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ನಿನ್ನೆ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು.ಕೆರೆ ಕೋಡಿ ನೀರನ್ನ ಬೇರೆಡೆಗೆ ಡೈವರ್ಟ್ ಮಾಡಿ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು 12 ತಾಸುಗಳ ನಿರಂತರ ಕಾರ್ಯಚರಣೆಯ ನಂತರ ಸಾವುಗೆದ್ದು ಬಂದಿದ್ದಾಳೆ.

RELATED ARTICLES

Related Articles

TRENDING ARTICLES