Sunday, December 22, 2024

ದಂಡ ಕಟ್ಟು ಎಂದಿದ್ದಕ್ಕೆ ಗಣಿ ಇಲಾಖೆಯ ಬಳಿಯೆ ನೇಣು ಬಿಗಿದುಕೊಂಡು ಲಾರಿಚಾಲಕ ಆತ್ಮಹತ್ಯೆ

ರಾಮನಗರ : ಲಾರಿಗಳ ಮೇಲಿರುವ ಕೇಸ್​ಗಳಿಗೆ ಗಣಿ ಅಧಿಕಾರಿಗಳು ದಂಡ ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೊಬ್ಬ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮೃತನನ್ನು ಮಾಗಡಿ ಮೂಲದ 50 ವರ್ಷದ ನಾಗೇಶ್​ ಎಂದು ಗುರುತಿಸಲಾಗಿದೆ.
ಪರ್ಮಿಟ್ ಇಲ್ಲದೇ ಕ್ರಶರ್ ನಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಗಣಿ ಅಧಿಕಾರಿಗಳು ನಾಗೇಶನ  ಲಾರಿ ಮೇಲೆ 10 ಕ್ಕೂ ಹೆಚ್ಚು ಕೇಸ್​ಗಳನ್ನು ದಾಖಲು ಮಾಡಿದ್ದರು. ಈ ಸಂಬಂಧ ನಾಗೇಶ್ ಲಾರಿಗಳ ಮೇಲೆ ಸುಮಾರು 8 ಲಕ್ಷ ದಂಡ ವಿಧಿಸಿದ್ದರು. ಇಂದು ಕಛೇರಿಗೆ ಬಂದು ಅಧಿಕಾರಿಗಳ ಜೊತೆ ನಾಗೇಶ್ ಚರ್ಚಿಸಿದ್ದನು. ಆದರೆ ದಂಡ ಕಟ್ಟುವಂತೆ ಅಧಿಕಾರಿಗಳು ತಿಳಿಸುತ್ತಿದ್ದಂತೆ ಹೊರಗಡೆ ಬಂದ ನಾಗೇಶ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಣಿ ಮತ್ತು ಭೂವಿಜ್ಞಾನ ಕಛೇರಿಯ  ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು.  ಪತಿ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ನಾಗೇಶ್​ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES