Sunday, December 22, 2024

ಪೇಜಾವರ ಶ್ರೀ ‘ಪುಡಿ ರಾಜಕಾರಣಿ’ ಎಂದು ಹೇಳಿದ್ದ ಬಿ ಕೆ ಹರಿಪ್ರಸಾದ್​ಗೆ ಟಾಂಗ್​ ನೀಡಿದ ಶ್ರೀಗಳು

ಮಂಗಳೂರು : ಪೇಜಾವರ ಶ್ರೀಗಳ ವಿರುದ್ದ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿವಾದಿತ ಹೇಳಿಕೆ ವಿಚಾರ ಮಂಗಳೂರಿನಲ್ಲಿ ಬಿ.ಕೆ.ಹರಿಪ್ರಸಾದ್ ವಿರುದ್ಧ ಪೇಜಾವರ ಸ್ವಾಮೀಜಿ ಪರೋಕ್ಷ ವಾಗ್ದಾಳಿ ನಡೆಸಿದರು. ಹರಿಪ್ರಸಾದ್ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಧಾರ್ಮಿಕ ಭಾಷಣದಲ್ಲಿ ಪೇಜಾವರ ಶ್ರೀ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದು. ಜಾತಿ ವ್ಯವಸ್ಥೆಯನ್ನು ಅನಿಷ್ಠಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಾ ಇದಾರೆ. ಒಂದೆಡೆ ನಾವು ಜಾತ್ಯಾತೀತರು ಅನ್ನೋದು, ಮತ್ತೊಂದೆಡೆ ಎಲ್ಲಾ ವಲಯದಲ್ಲೂ ಅದನ್ನ ಪೋಷಿಸೋದು.ನಾವೇನು ಯಾರನ್ನೂ ಕರೆದು ಹೀಗೆ ಮಾಡ್ತಾರೆ ಅಂತ ಹೇಳಿಲ್ಲ. ಲೋಕದ ವ್ಯವಸ್ಥೆ ನಮ್ಮಲ್ಲಿ ಬಂದು ನಿಮ್ಮ ಅಭಿಪ್ರಾಯ ಏನು ಅಂತ ಕೇಳಿತು, ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅಂತ ನಮ್ಮ ಅಭಿಪ್ರಾಯ ಹೇಳಿದೆವು.

ನಾವು ಹೇಳಿದ್ದು ತಪ್ಪಂತೆ, ಪುಡಿ ರಾಜಕಾರಣ ಮಾಡ್ತಾ ಇದಾರೆ ಅಂತಾರೆ,ಹಾಗಾದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ ಹೇಳಿ, ಹೌದು ಅಂತಾದ್ರೆ ಒಬ್ಬ ಮಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ, ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡ್ತೇನೆ ಅನ್ನೋದ್ರ ಅರ್ಥವೇನು?
ಸಮಾಜದಲ್ಲಿ ಮಾತನಾಡುವ ಹಕ್ಕಿರೋದು ಕೆಲವು ರಾಜಕಾರಣಿಗಳಿಗೆ ಮಾತ್ರ ಅಂತಾನಾ ? ಎಂದು ಪ್ರಶ್ನಿಸಿದರು.

ಪ್ರಜೆಗಳಿಗೆ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ, ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಿ ಬಿಡಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು, ಹಾಗಾಗಿ ನಾವು ಅದನ್ನ ಮಾತ್ರ ಮಾಡಿದ್ದೇವೆಯೇ ಹೊರತು ಬೇರೆ ಮಾಡಿಲ್ಲ, ಹಾಗಾಗಿ ಇಂಥಹ ರಾಜಕಾರಣಿಗಳಿಗೆ ಸದ್ಭುದ್ದಿ ಕೊಡು ಅಂತ ದೇವರಲ್ಲಿ ಕೇಳ್ತಾ ಇದೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES