ಬಾಗಲಕೋಟೆ : MTR ಮಸಾಲ ಪ್ಯಾಕೆಟ್ನಲ್ಲಿ ಹುಳುಗಳು ಪತ್ತೆಯಾದ ಘಟನೆ ಬಾಗಲಕೋಟೆಯ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಗ್ರಾಹಕರು ಎಂಟಿಆರ್ ಕಂಪನಿ ಬಗ್ಗೆ ಇರಿಸು ಮುರಿಸುಗೊಂಡಿದ್ದಾರೆ.
ಎಂಟಿಆರ್ ಎಂಬುದು ಹಲವು ವರ್ಷಗಳಿಂದ ಗ್ರಾಹರರ ಮೆಚ್ಚುಗೆಗೆ ಪಾತ್ರವಾಗಿರುವ ಮಸಾಲಾ ಸಂಸ್ಥೆಯಾಗಿದ್ದು, ಹಲವಾರು ದೇಶಗಳಲ್ಲಿ ಎಂಟಿಆರ್ನ ಮಳಿಗೆಗಳಿವೆ. ಆದರೆ ಜಮಖಂಡಿಯಲ್ಲಿ ಎಂಟಿಆರ್ ಮಸಾಲಾ ಪಾಕೆಟ್ ಖರೀದಿಸಿದ ಗ್ರಾಹಕರಿಗೆ ಶಾಕ್ ಎದುರಾಗಿದ್ದು ಎಂಟಿಆರ್ ಮಸಾಲಾ ಪಾಕೆಟ್ ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿದೆ. ಇನ್ನು ಸಹ ಎಕ್ಷ್ಪೈರ್ ಆಗದ ಪ್ಯಾಕೆಟ್ನಲ್ಲಿ ಹುಳುಗಳು ಪತ್ತೆಯಾಗಿದ್ದು ಎಂಟಿಆರ್ ಗ್ರಾಹಕರಿಗೆ ಆತಂಕ ಮೂಡಿಸಿದೆ.