ಹುಬ್ಬಳ್ಳಿ : ಡೀಸಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತುಹೋಗಿದ್ದ ಚಿಗರಿ ಬಸ್ಗೆ ಆ್ಯಸಿಡ್ ಸುರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಆ್ಯಸಿಡ್ ಹಕಿದ ಕೆಲವೆ ನಿಮಿಷದಲ್ಲಿನ ಕೋಟ್ಯಾಂತರ ಮೌಲ್ಯದ ಚಿಗರಿ ಬಸ್ ಇಂಜಿನ್ ಸೀಜ್ ಆಗಿದೆ.
ಕೆಲವೊಮ್ಮೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಬಾರೀ ನಷ್ಟವನ್ನು ಉಂಟು ಮಾಡುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡದ ನಡುವೆ ಸಂಚಾರ ಮಾಡುವ 3462 ನಂಬರಿನ ಚಿಗರಿ ಬಸ್ವೊಂದು ಡೀಸಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತು ಹೋಗಿತ್ತು. ರಸ್ತೆಮಧ್ಯೆ ನಿಂತಿದ್ದ ಬಸ್ಗೆ ಡೀಸೆಲ್ ತೆಗೆದುಕೊಂಡು ಹೋಗುವಂತೆ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದರು.
ಮೇಲಾಧಿಕಾರಿಗಳ ಸೂಚನೆಯಂತೆ ಸಿಬ್ಬಂದಿಗಳು ತರಾತುರಿಯಲ್ಲಿ ಡೀಸೆಲ್ ಬದಲು ಆ್ಯಸಿಡ್ ತುಂಬಿದ್ದ ಕ್ಯಾನ್ ತೆಗೆದುಕೊಂಡು ಹೋಗಿದ್ದ ಸಿಬ್ಬಂದಿಗಳು ಬಸ್ನ ಡೀಸೆಲ್ ಟ್ಯಾಂಕ್ಗೆ ಆ್ಯಸಿಡ್ ತುಂಬಿಸಿದ್ದರು. ಇದಾದ ನಂತರ ಬಸ್ ಚಾಲಕ ಬಸ್ ಅನ್ನು ಸ್ಟ್ರಾಟ್ ಮಾಡಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಸ್ನ ಇಂಜಿನ್ ಸುಟ್ಟಿಹೋಗಿದ್ದು ಇಂಜಿನ್ ಸೀಜ್ ಆಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬಸ್ ಹಾಳಾಗಿದೆ.
ತಪ್ಪಿದ ಭಾರೀ ದುರಂತ ?
ಒಂದು ವೇಳೆ ಬಸ್ನಲ್ಲಿದ್ದ ಡೀಸೆಲ್ ಜೊತೆಗೆ ಆ್ಯಸಿಡ್ ಸೇರಿ ರಿಯಾಕ್ಷನ್ ಆಗಿದ್ದರೆ ಬಸ್ ಇಂಜಿನ್ ಸ್ಪೋಟಗೊಂಡು ಬಾರೀ ಪ್ರಮಾಣದ ಹಾನಿಯಾಗುತ್ತಿತ್ತು. ಆದರೆ ಇದಾಗದೆ ಬಸ್ ಇಂಜಿನ್ ಸೀಜ್ ಆಗಿರುವುದರಿಂದಾಗಿ ಭಾರೀ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.