ಹಾಸನ : ವರ್ಷಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಸ್ಥಾನ ತುಂಬಿ ತುಳುಕುತ್ತಿದ್ದು. ಕಿಲೋ ಮೀಟರ್ಗಟ್ಟಲೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದ್ದು. ಕಿಲೋಮೀಟರ್‌ಗಟ್ಟಲೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಂದ ತುಂಬಿ ತುಳುಕುತ್ತಿರುವ ವಿವಿಐಪಿ, 1000ರೂ, 300ರೂಪಯಿಯ ವಿಶೇಷ ದರ್ಶನದ ಸಾಲುಗಳು ಕೂಡ ತುಂಬಿ ತುಳುಕುತ್ತಿದ್ದು. ಕ್ಷಣದಿಂದ ಕ್ಷಣಕ್ಕೆ ಭಕ್ತರ ಸಂಖ್ಯೆಯಲ್ಲಿ ಬಾರಿ ಏರಿಕೆಯಾಗುತ್ತಿದೆ ಎಂದು ಮಾಹಿತಿ ದೊರೆತಿದೆ.
ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಫೀಲ್ಡ್‌ಗಳಿದಿದ್ದು. ನೂಕುನುಗ್ಗಲು ಆಗದಂತೆ ಭಕ್ತರನ್ನು ಸರತಿ ಸಾಲಿನಲ್ಲಿ ಕಳುಹಿಸುತ್ತಿದ್ದಾರೆ. ಮುಂಜಾನೆಯಿಂದಲೂ ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿರುವ ಲಕ್ಷಾಂತರ ಭಕ್ತರು.