Saturday, November 23, 2024

ED ನೋಟಿಸ್​ : ವಿಚಾರಣೆಗೆ ಹಾಜರಾದ ಆರ್​ಟಿಐ ಕಾರ್ಯಕರ್ತ ಗಂಗರಾಜು

ಬೆಂಗಳೂರು : ಮೂಡ ಪ್ರಕರಣಕ್ಕೆ ಸಂಬಂಧಿಸಿದಂತೆ RTI ಕಾರ್ಯಕರ್ತ ಗಂಗರಾಜು ಇಂದು (ಅ.28) ಇಡಿ ವಿಚಾರಣೆಗೆ ಹಾಜರಾಗಿದ್ದು. ಅನೇಕ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಗಂಗರಾಜು ಭೈರತಿ ಸುರೇಶ್​ರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

 

ವಿಚಾರಣೆಗು ಮೊದಲು ಮಾತನಾಡಿದ ಗಂಗರಾಜು ನನಗೆ ಇಡಿ ಅವರು ನೋಟಿಸ್ ಕೊಟ್ಟಿದ್ದರು ಹಾಗಾಗಿ ಇಂದು ವಿಚಾರಣೆ ಗೆ ಬಂದಿದೇನೆ. ಇಡಿಯವರು ನನ್ನ ಬಳಿ ದಾಖಲೆಗಳನ್ನು ಕೇಳಿಲ್ಲ ಕೇವಲ ವಿಚಾರಣೆಗೆ ಹಾಜರಾಗುಂತೆ ನೋಟಿಸ್ ಕೊಟ್ಟಿದ್ದಾರೆ. ಅ.22ಕ್ಕೆ ಕೊಟ್ಟಿದ್ದರು ಅ.23 ಕ್ಕೆ ಬರುವುದಕ್ಕೆ ಹೇಳಿದ್ದರು. ಆದರೆ ನನಗೆ ಬರುವುದಕ್ಕೆ  ಆಗಿಲ್ಲ 24ಕ್ಕೆ ಬರುವಂತೆ ಹೇಳಿದ್ದರು. ನಾನು ಇಂದು (ಅ.28) ಬರೋದಾಗಿ ಮನವಿ ಮಾಡಿಕೊಂಡಿದ್ದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಗಂಗರಾಜು ಇಡಿ ಅಧಿಕಾರಿಗಳು ನನ್ನ ಬ್ಯಾಂಕ್ ದಾಖಲೆಗಳು ಸೇರಿದಂತೆ ಬೇರೆ ಬೇರೆ ದಾಖಲೆ ಕೇಳಿದ್ದಾರೆ.ಇಂದು ದಾಖಲೆಗಳೊಂದಿಗೆ ಬಂದಿದ್ದೆನೆ. ಮುರಳಿಧರ್ ಎಂಬ ಇ ಡಿ ಅಧಿಕಾರಿ ಎದುರು ವಿಚಾರಣೆಗೆ ಹಾಜರಾಗುತ್ತಿದ್ದೆನೆ 50:50 ಅನುಪಾತದಲ್ಲಿ ಭ್ರಷ್ಟಚಾರ ಆಗಿರುವ ದಾಖಲೆಗಳ ನನ್ನ ಬಳಿ ಇವೆ.
ಮುಡಾ ಅಧಿಕಾರಿ ಮಂಜುನಾಥ್ ಮನೆ ಮೇಲೆ ದಾಳಿ ಆಗಿದೆ. ನಾನು ಕೊಟ್ಟ ವಿಡಿಯೋ ಇಟ್ಟುಕೊಂಡು ದಾಳಿ ಮಾಡಿದ್ದಾರೆ. ಅಧಿಕಾರಿ ಹಣ ಪಡೆದುರೋದು ವಿಡಿಯೋದಲ್ಲಿದೆ, 50:50 ಅನುಪಾತದಲ್ಲಿ ಭ್ರಷ್ಟಾಚಾರ ಮಾಡಿರುವುದು ಮಂಜುನಾಥ್ ಎಂದು ಆರೋಪಿಸಿದ ಆರ್ ಟಿ ಐ ಕಾರ್ಯಕರ್ತ, ಜೊತೆಗೆ ಬೈರತಿ ಸುರೇಶ್ ಕಪಿಮುಸ್ಟಿಯಲ್ಲಿ ಒಂದಷ್ಟು ಅಧಿಕಾರಿಗಳು ಇದ್ದಾರೆ. ಆ ಅಧಿಕಾರಿಗಳನ್ನ ಹಾಗೂ ಸಚಿವ ಬೈರತಿ ಸುರೇಶ್ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES