Monday, December 23, 2024

ಬೆನ್ನು ನೋವಿನಿಂದ ನರಳುತ್ತಿರುವ ದಾಸನಿಗೆ ಇಂದಾದರು ಸಿಗುತ್ತಾ ಬೇಲ್​ ?

ಬಳ್ಳಾರಿ : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನರಕಯಾತನೆ ಅನುಭವಿಸುತ್ತಿರುವ ನಟ ದರ್ಶನ್​ ಪ್ರತಿದಿನ ಪ್ರತಿಕ್ಷಣ ಜಾಮೀನಿಗಾಗಿ ಹಂಬಲಿಸುತ್ತಿದ್ದು. ಇಂದಾದರು ಹೈಕೋರ್ಟ್​ನಿಂದ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್​ಗೆ ನಿದ್ದೆಯು ಬರುತ್ತಿಲ್ಲ, ಆಹಾರವು ಸರಿಯಾಗಿ ಸೇರುತ್ತಿಲ್ಲ, ಯಾವ ಕ್ಷಣದಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್​ ಆದರೊ ಅವಾಗಿನಿಂದ ರಾಜಾಥಿತ್ಯವು ಇಲ್ಲದಂತಾಗಿದೆ. ಹೆಚ್ಚಿನ ಸೌಲಭ್ಯ ಬೇಡುತ್ತಿರುವ ಡೇವಿಲ್​ಗೆ ಜೈಲಾಧಿಕಾರಿಗಳು ಕ್ಯಾರೆ ಎನ್ನುತಿಲ್ಲ ಇವೆಲ್ಲದರಿಂದಾಗಿ ದಾಸ ದರ್ಶನ್ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.

ಕಳೆದ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ ಸಿಸಿಎಚ್ ಕೋರ್ಟ್ ನಲ್ಲಿ  ತಿರಸ್ಕರಿಸಿತ್ತು. ಇದರಿಂದ ಬೇಸರಗೊಂಡಿದ್ದ ದಾಸ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದ. ಇಂದು  ಹೈಕೋರ್ಟ್​ನಲ್ಲಿ ದಾಸನ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಲಿದ್ದು. ಇಂದು ಬೇಲ್​ ಸಿಗುವ ನಿರೀಕ್ಷೆಯಲ್ಲಿ ಡೆವೀಲ್​ ಕಾಯುತ್ತಿದ್ದಾನೆ.

ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್​ಗೆ ಕಳೆದ ವಾರವಷ್ಟೆ ಜೈಲಾಧಿಕಾರಿಗಳು ವಿಮ್ಸ್​ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್​ ಮಾಡಿಸಿದ್ದರು. ಸ್ಕ್ಯಾನಿಂಗ್​ನಲ್ಲಿ ಬಂದಿರುವ ವರದಿ ದಾಸನಿಗೆ ಬೆನ್ನು ನೋವಿರುವುದನ್ನು ದೃಡಪಡಿಸಿದ್ದು. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ಕಾರಣವನ್ನಿಟ್ಟುಕೊಂಡು ಜಾಮೀನಿಗೆ ಅರ್ಜಿಸಲ್ಲಿಸಿದ್ದು. ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​ ಕಾಯುತ್ತಿದ್ದಾನೆ.

RELATED ARTICLES

Related Articles

TRENDING ARTICLES