Wednesday, January 1, 2025

ಒಂದೇ ದಿನ ದಾಖಲೆಗಳಿಲ್ಲದ 264 ವಾಹನಗಳ ಸೀಜ್​ ಮಾಡಿದ ಪೋಲಿಸರು

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ನಡೆದ ಕಾರ್ಯಾಚರಣೆಯಲ್ಲಿ 264 ದ್ವಿಚಕ್ರ ವಾಹನ ಮತ್ತು ಮೂರು ಆಟೋಗಳು ಪೊಲೀಸರು ವಶಕ್ಕೆ ಪಡೆದಿದ್ದು. ಸರಿಯಾದ ದಾಖಲೆಗಳು ಇಲ್ಲದ ಹಿನ್ನಲೆ ವಾಹನಗಳನ್ನು ಸೀಜ್​ ಮಾಡಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ .

ಹುಬ್ಬಳ್ಳಿ ಟೌನ್, ಗಂಟಿಕೇರಿ, ಕಸಬಾಪೇಟ್, ಹಳೇ ಹುಬ್ಬಳ್ಳಿ, ಬೆಂಡಿಗೇರಿ ಪೊಲೀಸ್ ಠಾಣೆಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು. ಅತೀ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಬಗ್ಗೆ ಪೋಲಿಸರಿಗೆ ಬಂದ ದೂರಿನನ್ವಯ ಈ ಕಾರ್ಯಾಚರಣೆ ಮಾಡಲಾಗಿದೆ.  ನಿನ್ನೆ (ಅ.27) ದಕ್ಷಿಣ ಉಪವಿಭಾಗದ ಒಟ್ಟು 14 ಪ್ರತ್ಯೇಕ ಸ್ಥಳಗಲ್ಲಿ ಚೆಕ್ ಪೋಸ್ಟ್ ಹಾಕಲಾಗಿತ್ತು.ಸುಮಾರು 264 ಅಗತ್ಯ ಮತ್ತು ಸೂಕ್ತ ದಾಖಲಾತಿ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗಿದೆ.

ಮುಖ್ಯವಾಗಿ ನಂಬರ್ ಪ್ಲೇಟ್ ಇಲ್ಲದೇ ಇರುವ ವಾಹನಗಳು ಸಾಕಷ್ಟಿವೆ ಎಂದು ಪೋಲಿಸರು ಮಾಹಿತಿ ನೀಡಿದ್ದು. ವಾಹನಗಳ ದಾಖಲಾತಿ ನೀಡಿದವರನ್ನು ಹೊರತು ಪಡಿಸಿ, ಉಳಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಲಿಸರಿಂದ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಚೈನ್ ಸ್ನಾಚಿಂಗ್, ದರೋಡೆ, ಕೊಲೆ ಪ್ರಯತ್ನ, ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ದ್ದಿಚಕ್ರ ವಾಹನಗಳನ್ನು ಉಪಯೋಗಿಸಲಾಗಿತ್ತು. ಹೆಣ್ಣುಮಕ್ಕಳು ಹೆಚ್ಚು ಇರುವ ಸ್ಥಳಗಲ್ಲಿ ಕಿರಿಕಿರಿ ನೀಡೋದಕ್ಕೆ ಬಳಸಲಾಗುತಿತ್ತು. ಅದ್ದರಿಂದ ಇವುಗಳಿಗೆ ಕಡಿವಾಣ ಹಾಕಲು ಈ ಕಾರ್ಯಚರಣೆ ಮಾಡಲಾಗಿದೆ ಎಂದು ಹೇಳಿರುವ ಪೋಲಿಸರು. ವಶಕ್ಕೆ ಪಡೆದ ವಾಹನಗಳ ಮೇಲೆ ಪ್ರಕರಣ ಸಹ ದಾಖಲು ಮಾಡಲಾಗುತ್ತಿದೆ. ಈ ವಾಹನಗಳನ್ನು ನಿಯಮಾವಳಿ ಪ್ರಕಾರವೇ ಬಿಡಿಸಿಕೊಳ್ಳಬೇಕು ಎಂದು ಹೇಳಿದರು.

ನಿನ್ನೆ ಮೊದಲ ಹಂತದ ಕಾರ್ಯಾಚರಣೆ ಮಾಡಲಾಗಿದೆ.ಸರಿಯಾದ ದಾಖಲಾತಿ ಇಟ್ಟುಕೊಳ್ಳಿ ಅಂತ ಸಾರ್ವಜನಿಕರಿಗೆ ಮನವಿ ಮಾಡ್ತೇನೆ. ಡಿಜಿ ಲಾಕರ್ ನಲ್ಲೂ ನಮಗೆ ತೋರಿಸಲು ಅವಕಾಶ ಇದೆ
ದೀಪಾವಳಿ ಹಬ್ಬದ ಹಿನ್ನೆಲೆ ಹೆಣ್ಣುಮಕ್ಕಳು ಹಲವಡೆ ಹೋಗುವ ಸಾಧ್ಯತೆ ಇರುವುದರಿಂದ ಮಹಿಳಾ ಸುರಕ್ಷತೆ, ವಿದ್ಯಾರ್ಥಿಗಳ ಸುರಕ್ಷಿತೆ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡಲಾಗಿದೆ.ಈಗಾಗಲೇ ನಾವು ಏರಿಯಾ ಡಾಮಿನೆಷನ್ ಕೂಡ ಮಾಡಿದ್ದೇವೆ ಈ ಕಾರ್ಯಾಚರಣೆ ಸಬ್ ಡಿವಿಷನ್ ಹಂತದಲ್ಲಿರುತ್ತೆ, ಎಸಿಪಿ ಸೇರಿ ಎಲ್ಲಾ ಇನ್ಸ್ಪೆಕ್ಟರ್ ಚೆಕ್ ಪೋಸ್ಟ್ ಹಾಕಿ ಕಾರ್ಯಾಚರಣೆ ಮಾಡಲಾಗುತ್ತೆ. ನಾವು ಪ್ರಕರಣ ದಾಖಲು ಮಾಡಿಕೊಂಡರೆ ವಾಹನ ಮಾಲೀಕರಿಗೆ ಸಮಸ್ಯೆ ಆಗುತ್ತೆ ಆದ್ದರಿಂದ ವಾಹನ ಸವಾರರು ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳಿ ಎಂದು ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES