ಚಾಮರಾಜನಗರ : ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ನಡೆಸಲು ಸಾಧ್ಯವಾಗಿದ್ದು. ಇದೇ ಯೋಜನೆಯ ಲಾಭ ಪಡೆದ ನಿರ್ವಾಹಕನೊಬ್ಬ ಅನ್ಯರಾಜ್ಯದವರಿಂದ ಹಣ ಪಡೆದು ಅವರಿಗು ಉಚಿತ ಟಿಕೆಟ್ ನೀಡಿದ್ದಾನೆ ಎಂದು ಜಿಲ್ಲೆಯ ವಿಧ್ಯಾರ್ಥಿಗಳು ಆರೋಪಿಸಿ ದೂರು ನೀಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಸಿದ್ದರಾಮಯ್ಯನವರ ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿದ್ದು. ಚಾಮರಾಜನಗರದಲ್ಲೊಬ್ಬ ನಿರ್ವಾಹಕ ಹಣ ಪಡೆದು ಶಕ್ತಿಯೋಜನೆಯ ಹಣ ಪಡೆದಿದ್ದಾನೆ. ಅನ್ಯರಾಜ್ಯದವರಿಂದ, ವೃದ್ದರಿಂದ ಈ ರೀತಿ ಸುಲಿಗೆ ಮಾಡಿದ್ದು. ಜಿಲ್ಲೆಯ ಇಂಜಿನಯರಿಂಗ್ ವಿಧ್ಯಾರ್ಥಿಗಳಿಂದಲು ಹಣ ಪಡೆದು ಶಕ್ತಿ ಯೋಜನೆಯ ಟಿಕೆಟ್ ನೀಡಿದ್ದಾನೆ ಎಂದು ಆರೋಪಿಸಿ ವಿಧ್ಯಾರ್ಥಿಗಳು ಬಸ್ ಡಿಪೋ ಮ್ಯಾನೇಜರ್ಗೆ ದೂರ ನೀಡಿದ್ದಾರೆ, ವಿಧ್ಯಾರ್ಥಿಗಳ ಆಕ್ರೋಶಕ್ಕೆ ಸ್ಪಂಧಿಸಿದ ಡಿಪೋ ಮ್ಯಾನೇಜರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.