ದೆಹಲಿ : ನರೇಂದ್ರ ಮೋದಿಯವರ 115 ನೇ ಮನ್ ಕೀ ಬಾತ್ ನಲ್ಲಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸರು. ಅನಿಮೇಷನ್ನಲ್ಲಿ ಭಾರತದ ಸ್ವಾವಲಂಬನೆ, ಸೈಬರ್ ಕೈಂ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನರೇಂದ್ರ ಮೋದಿ ಮಾತನಾಡಿದರು. ಅದರಲ್ಲಿ ವಿಶೇಷವಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯ ಯುವಕನನ್ನು ಪ್ರಸ್ತಾಪಿಸಿ ಮಾತನಾಡಿದರು.
ಸಪ್ಟೆಂಬರ್ 16 ರಂದು ವಿಜಯಪುರ ಸಂತೋಷ ಪಾಟೀಲ್ ಎಂಬ ಯುವಕನಿಗೆ ವಂಚಕರು ವಾಟ್ಸಪ್ ಕರೆ ಮೂಲಕ ಆತನನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದರು. ಸಂತೋಷ ಪಾಟೀಲ್ ಆ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ರೆಕಾರ್ಡ ಮಾಡಿಕೊಂಡಿದ್ದ ವಿಡಿಯೋವನ್ನು ಸಂತೋಷ ಪಾಟೀಲ್ ಸೈಬರ್ ಪೋಲಿಸರಿಗೆ ನೀಡಿ ದೂರು ದಾಖಲು ಮಾಡಿದ್ದನು.
ಇಂದು ಪ್ರಧಾನಿ ನರೇಂದ್ರ ಮೋದಿಯವರ 115 ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಈ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸೈಬರ್ ವಂಚಕರ ಬಗ್ಗೆ ಎಚ್ಚರವಾಗಿರುವಂತೆ ಸಲಹೆ ನೀಡಿದರು.