Friday, December 27, 2024

ಕನ್ನಡ ಬರಲ್ಲ ಎಂದ ಕ್ಯಾಷಿಯರ್​ ಮೇಲೆ ಹಲ್ಲೆ ಮಾಡಿದ ಕುಡುಕ

ಬೆಂಗಳೂರು : ಕನ್ನಡದ ಹೆಸರಲ್ಲಿ ಅಂಗಡಿಯವನ ಜೊತೆ ಜಗಳ ತೆಗೆದು  ಕುಡುಕನೊಬ್ಬ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಲ್​ ಕೊಡುವಂತೆ ಕೇಳಿದಕ್ಕೆ ಬಾರಿನ ಕ್ಯಾಷಿಯರ್​ ಮೇಲೆ ಹಲ್ಲೆ ನಡೆಸಲಾಗಿದೆ.

ವಿಜಯನಗರದ ಹಂಪಿನಗರದಲ್ಲಿ ನಡೆದಿರುವ ಘಟನೆಯಾಗಿದ್ದು. ಅಂಗಡಿಯಲ್ಲಿ ತನಗೆ ಬೇಕಾಗಿದ್ದನ್ನ ತೆಗೆದು ಕೊಂಡು ಅನಂತರ ಹಣ ಕೊಡಲು ಕ್ಯಾಷಿಯರ್​ ಬಳಿ ಹಣ ಪಾವತಿ ಮಾಡುವ ವೇಳೆ ಕ್ಯಾಷಿಯರ್​ ಕನ್ನಡದಲ್ಲಿ ಮಾತನಾಡಿಲ್ಲ ಎಂಬ ವಿಷಯಕ್ಕೆ  ಕಿರಿಕ್​ ತೆಗೆದ ಆಸಾಮಿ. ಕ್ಯಾಷಿಯರ್​ಗೆ ಕನ್ನಡ ಬರೊದಿಲ್ಲವ ಎಂದು ಕೇಳಿದ್ದಾನೆ ಅದಕ್ಕೆ ಆತ ಕನ್ನಡ ಬರಲ್ಲ ಎಂದು ಹೇಳಿದ್ದಕ್ಕೆ, ಆತನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.

ವಿಜಯನಗರದ RPC ಲೇಔಟ್ ನಲ್ಲಿ ಫ್ರೈಸ್ ಕ್ಲಬ್ ನಲ್ಲಿ ನೆನ್ನೆ ಮಧ್ಯಾಹ್ನ ಘಟನೆಯಾಗಿದ್ದು. ಅಂಗಡಿಯ ಮಾಲೀಕನಿಂದ  ಫೋಲಿಸ್​ ಠಾಣೆಗೆ  ಮಾಹಿತಿ ನೀಡಿದ್ದಾನೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರೊ ವಿಜಯನಗರ ಪೊಲೀಸ್ ಠಾಣ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES