Wednesday, January 22, 2025

ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗಾಂಜಾ ದಂದೆ. 82 ಲಕ್ಷ ಮೌಲ್ಯದ ಗಾಂಜ ವಶ

ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿ ಪೋಲಿಸರು ಭರ್ಜರಿ ಕಾರ್ಯಚರಣೆ ಮಾಡಿದ್ದು. ಎರಡು ಪ್ರತ್ಯೇಕ ಪ್ರಕರಣದಲ್ಲಿ ಲಕ್ಷಂತರ ಮೌಲ್ಯದ ಗಾಂಜ ಸೇರಿದಂತೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊಸಕೋಟೆ ಪೋಲಿಸರಿಂದ ಈ ಭರ್ಜರಿ ಕಾರ್ಯಾಚರಣೆ ನಡೆದಿದ್ದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು
75 ಲಕ್ಷ ಮೌಲ್ಯದ ಆಶೀಷ್ ಗಾಂಜಾ ಎಣ್ಣೆ ಹಾಗೂ 7.5 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಆರೋಪಿಗಳನ್ನು ಬಂಧನ ಮಾಡಿದ್ದು. ಬಂಧಿತರಿಂದ ಒಂದು ಕಾರು,ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ‌ ಮೇರೆಗೆ ಹೊಸಕೋಟೆ ಟೋಲ್ ಸಮೀಪ ಕಾರ್ಯಾಚರಣೆ ನಡೆಸಿದ್ದು ಎರಡು ಪ್ರಕರಣಗಳಲ್ಲಿ ಅಬ್ದುಲ್ ಸಲಾಂ (39) , ಅನ್ಸೀರ್ (30) , ಸರಾನ ಕನ್ಹಾರ್ (38) ಮತ್ತು ಬರೂನ್ ಮಲ್ಲಿಕ್ (24) ಬಂಧಿತ ಆರೋಪಿಗಳನ್ನು ಬಂಧಿಸಲಾಗಿದೆ. ಹೊಸಕೋಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES