ರಾಯಚೂರು : ಹುಟ್ಟತ್ತ ಅಣ್ಣ ತಮ್ಮಂದಿರು, ಬೆಳಿತ ದಾಯಾದಿಗಳು ಎಂಬ ಮಾತು ಅಕ್ಷರಶಹ ಸತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆಸ್ತಿ ವಿವಾದಕ್ಕೆ ಸ್ವಂತ ತಮ್ಮ ಬೆಳೆದಿದ್ದ 8 ಎಕರೆ ತೊಗರಿ ಬೆಳೆಯನ್ನು ಅಣ್ಣ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾನೆ.
ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಘಟನೆಯಾಗಿದ್ದು. ಶ್ರೀರಾಮುಲು ಎಂಬ ರೈತನು ಬೆಳೆದಿದ್ದ ಬೆಳೆ ನಾಶವಾಗಿದೆ. ಅಣ್ಣ ತಮ್ಮಂದಿರ ನಡುವೆ ಭೂಮಿ ಹಂಚಿಕೆ ಮಾಡುವ ಬಗ್ಗೆ ವಿವಾದ ಉಂಟಾಗಿತ್ತು. ಈ ವಿವಾದವನ್ನು ಕೆಲದಿನಗಳ ಹಿಂದೆ ರಾಜಿ ಸಂದಾನ ಮಾಡಿ ಬಗೆಹರಿಸಲಾಗಿತ್ತು. ಆದರೂ ಇವರ ನಡುವೆ ಇದ್ದ ದ್ವೇಷದಿಂದ ಈಗ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.
ಸುಮಾರು 2 ವರೆ ಲಕ್ಷ ರೂ ಖರ್ಚು ಮಾಡಿ ರೈತ ಶ್ರೀರಾಮುಲು 8 ಎಕರೆ ಪ್ರದೇಶದಲ್ಲಿ ತೊಗರಿ ಬೆಲೆದಿದ್ದನು. ತೊಗರಿ ಬೆಳೆಯು ಕೂಡ ಚನ್ನಾಗಿ ಬಂದು ಸುಮಾರು 6 ರಿಂದ 7 ಲಕ್ಷ ರೂಪಾಯಿ ಲಾಭವನ್ನು ನಿರೀಕ್ಷಿಸಲಾಗಿತ್ತು. ಆದರೆ ಸೀತಾರಾಮರಡ್ಡಿ, ವೆಂಕಟರೆಡ್ಡಿ, ಗೋವರ್ಧನ ರೆಡ್ಡಿ ಎಂಬುದರಿಂದ ಬೆಳೆ ನಾಶ ಮಾಡಿದ್ದಾರೆ ಎಂದು ರೈತ ಶ್ರೀರಾಮುಲು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು. ಬೆಳೆನಾಶಕ್ಕೆ ಪರಿಹಾರ ಒದಗಿಸಿಕೊಂಡುವಂತೆ ರೈತನ ಮನವಿ ಮಾಡಿದ್ದಾನೆ.