Wednesday, January 22, 2025

ನೀರು ಕೊಟ್ಟ ಯೋಗೇಶ್ವರ್​ಗೆ ವಿಷ ಹಾಕಿದ್ರೀ :ಈ ಬಾರಿಯಾದರು ಗೆಲ್ಲಿಸಿ ಎಂದ ಬಾಲಕೃಷ್ಣ

ರಾಮನಗರ : ಶಾಸಕ  ಬಾಲಕೃಷ್ಣ ಕುಮಾರಸ್ವಾಮಿಯವರ ಮೇಲೆ ವಾಗ್ದಾಳಿ ನಡೆಸಿದ್ದು. ಕುಮಾರಸ್ವಾಮಿಯವರ  ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು ಎಂದು ಯಡಿಯೂರಪ್ಪನವರೆ ಹೇಳಿದ್ದಾರೆ. ಈಗ ಅವರನ್ನೇ ಕರೆದುಕೊಂಡು ಹೋಗಿ ಕಚ್ಚಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಬಾಲಕೃಷ್ಣ ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ.ಎಲ್ಲಾ ಕಡೆ ಅವರ ಕುಟುಂಬದರನ್ನೆ ಪ್ರತಿಷ್ಠಾಪನೆ ಮಾಡಿದ್ದಾರೆ. ಅವರಿಗೆ ನಾವ್ಯಾರು ಒಕ್ಕಲಿಗರ ರೀತಿ ಕಾಣುವುದಿಲ್ವಾ.?
ನಾವು ಕೂಡ ಅಣ್ಣತಮ್ಮಂದಿರು, ಈ ಜಿಲ್ಲೆಯ ಮಕ್ಕಳು ನಾವು.ನಾವು ಜಗಳ ಆಡಿದ್ದೀವಿ, ಆದ್ರೆ ದ್ವೇಷ ಮಾಡಿಲ್ಲ.
ಸಿಪಿವೈಗೆ ಅನ್ಯಾಯ ಆಗೊದು ಗೊತ್ತಾದಾಗ ಅವರನ್ನು ಕರೆತಂದು ಟಿಕೆಟ್ ಕೊಟ್ಟಿದ್ದೀವಿ ಎಂದು ಸಿ.ಪಿ ಯೋಗೇಶ್ವರ್​ ಕಾಂಗ್ರೆಸ್​ ಟಿಕೆಟ್​ ಕೊಟ್ಟಿದ್ದನ್ನು ಸರ್ಮತಿಸಿಕೊಂಡರು.

ಕುಮಾರಸ್ವಾಮಿ ಒಂದು ರೀತಿ  ಟೂರಿಂಗ್ ಟಾಕೀಸ್ ಇದ್ದ ಹಾಗೆ ಅದಕ್ಕೆ ಅವರು ಮಂಡ್ಯಕ್ಕೆ ಹೋದ್ರೂ, ರಾಮನಗರ ಹೋದ್ರು ಈಗ ಇಲ್ಲಿಗೆ ಬಂದವ್ರೆ.ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ತಂದು ಶಾಸಕನನ್ನಾಗಿ ಮಾಡಿದ್ದು ಡಿ.ಕೆ ಸುರೇಶ್ ಎಂದರು.

ಮುಂದುವರಿದು ಮಾತನಾಡಿದ ಬಾಲಕೃಷ್ಣ ಚನ್ನಪಟ್ಟಣದವರಿಗೆ ಸ್ವಾಭಿಮಾನ ಇಲ್ಲ.ತಾಲೂಕಿಗೆ ನೀರುಕೊಟ್ಟ ಯೋಗೇಶ್ವರ್​ರನ್ನೆ ಸೋಲಿಸಿದರು. ನೀರು ಕೊಟ್ಟ ಯೋಗೇಶ್ವರ್ ಗೆ ವಿಷ ಹಾಕಿದರು.ನಿಮಗೆ ದೇವರು ಒಳ್ಳೆಯದು ಮಾಡಲ್ಲ.ಈಗ ಸ್ವಾಭಿಮಾನ ಬೆಳೆಸಿಕೊಳ್ಳಿ ಯೋಗೇಶ್ವರ್ ಗೆಲ್ಲಿಸಿ ಎಂದು ಕೋಡಂಬಳ್ಳಿ ಗ್ರಾಮದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದರು

RELATED ARTICLES

Related Articles

TRENDING ARTICLES