Sunday, December 22, 2024

ಸಾಲು ಸಾಲು ರಜೆ ಹಿನ್ನಲೆ 2 ಸಾವಿರ ಹೆಚ್ಚುವರಿ ಬಸ್ ನಿಯೋಜಿಸಿದ ರಾಜ್ಯ ಸರ್ಕಾರ

ಬೆಂಗಳೂರು : ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆಗಳು ಬಂದಿರುವ ಹಿನ್ನಲೆ ರಾಜ್ಯ ಸಾರಿಗೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ 2 ಸಾವಿರ ಹೆಚ್ಚುವರಿ ಬಸ್​ ಗಳನ್ನು ನಿಯೋಜಿಸಿದೆ. ಈ ಬಾರಿ ದೀಪಾವಳಿಗೆ ದೀರ್ಘ ನಾಲ್ಕು ದಿನಗಳ ರಜೆ ಬಂದಿರುವುದರಿಂದ ರಾಜಧಾನಿಗೆ ವಲಸೆ ಬಂದಿರುವ ಹಕ್ಕಿಗಳು ತಮ್ಮ ಗೂಡಿಗೆ ವಾಪಾಸಾಗಲು ಹವಣಿಸುತ್ತಿವೆ. ಅವರಿಗೆ ಅನುಕೂಲವಾಗಲು ಈ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 31_ರಿಂದ ನವೆಂಬರ್ 3_ರ ವರೆಗೆ ನಾಲ್ಕು ದಿನಗಳು ರಜೆ

  • ಅಕ್ಟೋಬರ್ 31_ರಂದು ನರಕ ಚತುರ್ದಶಿ
  • ನವೆಂಬರ್ ೧_ರಂದು ಕನ್ನಡ ರಾಜ್ಯೋತ್ಸವ
  • ನವೆಂಬರ್ 2_ರಂದು ಬಲಿಪಾಡ್ಯಮಿ
  • ನವೆಂಬರ್ 3_ರಂದು ಭಾನುವಾರ ರಜೆ

 

 

RELATED ARTICLES

Related Articles

TRENDING ARTICLES