Monday, December 23, 2024

ಕುಮಾರಸ್ವಾಮಿ ಬಂಡೆಗೆ ಹೆದರಿಕೊಂಡು ಮಂಡ್ಯಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ ಶಿವರಾಮೇಗೌಡ

ಮಂಡ್ಯ :  ಚುನಾವಣೆ ಬಂತು ಆಂದ್ರೆ ಸಾಕು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ಬಾಮಿ ಯಾರನ್ನಾದರು ಬಲಿ ತಗೋತಾರೆ. ತಮ್ಮ ಕುಟುಂಬಕ್ಕೋಸ್ಕರ ಯಾರನ್ನ ಬೇಕಾದರೂ ಬಲಿ ಕೊಡ್ತಾರೆ. ಹೋಮದಲ್ಲಿ ಬೆಂಕಿ ಹಾಕಿ ಆಹುತಿ ಮಾಡ್ತಾರಲ್ಲಾ ಹಾಗೆ ಮಾಡ್ತಾರೆ. ಈ ಬಾರಿ ಏನೇ ಮಾಡಿದರು ಅವರು ನಿಖಿಲ್​ರನ್ನ ಗೆಲ್ಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರನ್ನ ಮೂರನೇ ಬಾರಿ ಆಹುತಿ ಕೊಡ್ತಾವ್ರೆ ಅಂತ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಭವಿಷ್ಯ ನುಡಿದಿದ್ದಾರೆ.

ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಕುಮಾರಸ್ವಾಮಿ ವಿರುದ್ದ ನಾಗಮಂಗಲದಲ್ಲಿ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಅವರು ಬಿಜೆಪಿ ಪಕ್ಷವನ್ನ ಕಟ್ಟುತ್ತಾರೆ ಅಂದು ಕೊಂಡಿದ್ವಿ ಆದ್ರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳೋ ಮೂಲಕ ಪಕ್ಷವನ್ನ ಉಸಿರುಗಟ್ಟುವ ವಾತಾವರಣಕ್ಕೆ ತಳ್ಳಿದ್ದಾರೆ. ಜೆಡಿಎಸ್ ನವರು ಬಿಜೆಪಿಯನ್ನ ನುಂಗಿದ್ದಾರೆ. ಇವರ ಆಟಕ್ಕೆ ಬಿಜೆಪಿಯಲ್ಲಿದ್ದ ಯೋಗೇಶ್ಬರ್ ಬಲಿಯಾದ್ರು. ಯಾವುದೇ ಚುನಾವಣೆ ಬಂದ್ರು ಕುಮಾರಸ್ವಾಮಿ ಯಾರಾದರೊಬ್ಬರನ್ನ ಬಲಿ ತೆಗೆದುಕೊಳ್ಳುತ್ತಾರೆ. ಮೊದಲಿಂದಲೂ ಇವರು ಹೀಗೇ ಮಾಡ್ತಿದ್ದಾರೆ. ಈ ಬಾರಿ ಚನ್ನಪಟ್ಟಣ ಚುನಾವಣೆಯಲ್ಲಿ ಯೋಗೇಶ್ವರ್ ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಿಖಿಲ್ ಅಲ್ಲ ಕುಮಾರಸ್ವಾಮಿ ಬಂದ್ರು ಯೋಗೇಶ್ವರ್ ಗೆಲುವು ತಡೆಯೋಕ್ಕಾಗಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು Everyday sunday ಅಂದುಕೊಂಡಿದ್ದಾರೆ. ಆದರೆ ಆ ರೀತಿ ಆಗಲ್ಲ. ಈ ಬಾರಿ ನಿಖಿಲ್ ಬಲಿಯಾಗೇ ಆಗ್ತಾನೇ ಎಂದಿರೋ ಶಿವರಾಮೇಗೌಡ, ಯಡಿಯೂರಪ್ಪ ಬಂದ್ರೂ, ವಿಜಯೇಂದ್ರ ಅಲ್ಲೇ ಮಲ್ಕೊಂಡ್ರೂ ಚುನಾವಣೆ ಗೆಲ್ಲೋಕ್ಕಾಗಲ್ಲ. ಕುಮಾರಸ್ವಾಮಿ ಅವರು ಈಗಾಗಲೇ ರಾಮನಗರದ ಬಂಡೆಗೆ ಹೆದರಿ ಮಂಡ್ಯಕ್ಕೆ ಬಂದಿದ್ದಾರೆ. ಯಾಕೆ ? ಮಂಡ್ಯದಲ್ಲಿ ಗಂಡಸರಿಲ್ವಾ ಎಂದು ಹರಿಹಾಯ್ದ ಗೌಡರು, ಮುಂದಿನ ಚುನಾವಣೆಗೆ ಮಂಡ್ಯ ಜೆಡಿಎಸ್ ನಲ್ಲಿ ಯಾರಾದರೂ ಬಲಿಯಾಗೇ ಆಗ್ತಾರೆ ಎಂದರಲ್ಲದೆ, ತೆಳ್ಳಗೆ, ಬೆಳ್ಳಗೆ ಅವ್ರೆ ಅಂತ ಯಾರೇ ಬಂದ್ರು ಮನೆಗೆ ಸೇರಿಸಿಕೊಳ್ಳೋಕ್ಕಾಗುತ್ತಾ ? ಮಂಡ್ಯದವ್ರು ಕೈಗೆ ಬಳೆ ತೊಟ್ಕೋಬೇಡ್ರಪ್ಪಾ ಅಂತ ಕರೆ ನೀಡಿದ್ರು.

RELATED ARTICLES

Related Articles

TRENDING ARTICLES