ಸಿನಿಮಾ : ಬ್ರೂಸ್ಲೀ ಎಂಬ ಹೆಸರನ್ನು ಕೇಳದೆ ಇರುವವರಿಲ್ಲ. ಅಮೇರಿಕಾದಲ್ಲಿ ಹುಟ್ಟಿ ಪ್ರಪಂಚದಾದ್ಯಂತ ತನ್ನ ಅಭಿಮಾನಿ ಬಳಗವನ್ನು ಹೊಂದಿದ ಈ ಅಧ್ಬುತ ಸಾಹಸಗಾರ ಕೇವಲ 32 ವರ್ಷಕ್ಕೆ ಸಾವನ್ನಪ್ಪಿದ ಎಂದರೆ ಯಾರಿಗು ನಂಬಲೂ ಸಾಧ್ಯವಿಲ್ಲ. ನಾವಿಂದು ಅಂತಹ ಸಾಹಸಗಾರನ ಬಗ್ಗೆ ತಿಳಿದುಕೊಳ್ಳೋಣ.
ಬ್ರೂಸ್ಲಿ ಕುಂಗ್ಫೂ ಜಗತ್ತಿನ ಲೆಜಂಡರಿ ಎಂದರು ತಪ್ಪಾಗುವುದಿಲ್ಲ. ಹುಟ್ಟಿದಾಗಿನಿಂದಲೂ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಬ್ರೂಸ್ಲಿ ಒಂದು ಸಮಯದಲ್ಲಿ ಹಾಲಿವುಡ್ ಸಾಮ್ರಾಜ್ಯವನ್ನು ಆಳುತ್ತಿದ್ದರು. ಇಂತಹ ಬ್ರೂಸ್ಲಿ 27 ನವೆಂಬರ್ 1941 ರಲ್ಲಿ ಅಮೇರಿಕಾದ ಸ್ಯಾನ್ಪ್ರಾನ್ಸಿಸ್ಕೋದಲ್ಲಿ ಜನಿಸಿದರು. ಇವರ ತಂದೆ ಲೀ-ಹೊಯ್-ಚುನ್ ಮತ್ತು ತಾಯಿ ಗ್ರೇಸ್ ಹೊ.
ಅಮೇರಿಕಾದ ಚೈನೀಸ್ ಆಸ್ಪತ್ರೆಯಲ್ಲಿ ಜನಿಸಿದ ಇವರಿಗೆ ಬ್ರೂಸ್ಲಿ ಎಂಬ ಹೆಸರನ್ನು ಆಸ್ಪತ್ರೆಯ ನರ್ಸ್ ಒಬ್ಬರು ಇಟ್ಟರು. ಬಾಲ್ಯದಿಂದಲೆ ತುಂಟನಾಗಿದ್ದ ಬ್ರೂಸ್ಲಿ ಚಿಕ್ಕ ವಯಸ್ಸಿನಿಂದಲೆ ಕಲೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ನಂತರ ನಿಧಾನವಾಗಿ ಮನಸ್ಸು ಮಾರ್ಷಲ್ ಆರ್ಟ್ಸ್ ಎಂಬ ಸಾಹಸ ಕಲೆಯ ಕಡೆಗೆ ಹೊರಳಿ ಅದರ ಕಡೆಗೆ ಹೆಚ್ಚು ಆಸಕ್ತಿ ತೋರಿಸಲು ಆರಂಭಿಸಿದರು. ನಂತರ ಅವರು ವಿಶ್ವ ಶ್ರೇಷ್ಟ ಕುಂಗ್ಫೂ ಮಾಸ್ಟರ್ ಬಳಿ ಕುಂಗ್ಫೂ ಕಲಿತುಕೊಂಡರು.
ನಂತರ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದ ಬ್ರೂಸ್ಲಿ ತಮ್ಮ ಸಿನಿಮಾಗಳಲ್ಲಿ ಸಾಹಸ ದೃಷ್ಯಗಳಿಂದ ಹೆಚ್ಚು ಪ್ರಖ್ಯಾತರಾದರು. ಇವರು ಎಷ್ಟು ವೇಗವಾಗಿ ತಮ್ಮ ಕೈಕಾಲುಗಳನ್ನು ತಿರುಗಿಸುತ್ತಿದ್ದರು ಎಂದರೆ ಸಿನಿಮಾಗಳಲ್ಲಿ ಅವರ ಸಾಹಸ ದೃಷ್ಯಗಳನ್ನು ನಿಧಾನಗತಿಯಲ್ಲಿ ತೋರಿಸಲಾಗುತ್ತಿತ್ತು. 1973ರಲ್ಲಿ ತೆರೆಕಂಡ ಎಂಟರ್ ದ ಡ್ರ್ಯಾಗನ್ (Enter the Dragon) ಸಿನಿಮಾ ಇಂದಿಗು ಹಚ್ಚ ಹಸುರಾಗಿದೆ.
ಇಂತಹ ಅದ್ಬುತ ಕಲೆಗಾರ, ಸಾಹಸಗಾರ ತಮ್ಮ ಜೀವನವನ್ನು ಈ ಭೂಮಿಯ ಮೇಲೆ ಕಳೆದಿದ್ದು ಅತಿ ಕಡಿಮೆ ಸಮಯ. ಸಾಹಸ ದೃಷ್ಯವನ್ನೆ ಮೈಗೂಡಿಸಿಕೊಂಡಿದ್ದ ಬ್ರೂಸ್ಲಿಗೆ ಮೆದುಳಿನ ಸಮಸ್ಯೆಯಿಂದಾಗಿ ಅವರು ಔಷದಿಯನ್ನು ಸೇವಿಸುತ್ತದ್ದರು. ಈ ಔಷದಿಯ ಅಡ್ಡ ಪರಿಣಾಮದಿಂದ ಬ್ರೂಸ್ಲಿ ಅವರು 1973 ರ ಜುಲೈ 20ರಂದು ಮರಣ ಹೊಂದಿದರು. ಇವರ ಸ್ಮಾರಕ ಅಮೇರಿಕಾದ ವಾಷಿಂಗ್ಟನ್ನಲ್ಲಿದ್ದು ಅನೇಕ ಕುಂಗ್ಫೂ ಆಸಕ್ತರಿಗೆ ಇಂದಿಗೂ ಬ್ರೂಸ್ಲಿ ಗುರುವಾಗಿದ್ದಾರೆ.