ಬಳ್ಳಾರಿ : ಸಂಡೂರು ಸಂಗ್ರಾಮ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು. ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಬಿಜೆಪಿ ರಣ ಕಹಳೆ ಮೊಳಗಿಸಿದೆ. ಕಾಂಗ್ರೆಸ್ ಪಕ್ಷದ ಅನ್ನಪೂರ್ಣ ತುಕಾರಾಂ ಮತ್ತು ಬಿಜೆಪಿ ಪಕ್ಷದ ಬಂಗಾರು ಹನುಮಂತು ನಡುವೇ ನೇರ ಪೈಪೋಟಿ ನಡೆಯುತ್ತಿದ್ದು ಇವರನ್ನು ಗೆಲ್ಲಿಸಲು ಘಟಾನುಗಟಿಳು ಇವರ ಬೆನ್ನುಗೆ ನಿಂತಿರುವುದು ಮತ್ತೊಂದು ವಿಶೇಷವಾಗಿದೆ.
ಕಾಂಗ್ರೇಸ್ ಮತ್ತು ಬಿಜೆಪಿ ನಡುವೇ ನೇರ ಹಣಾಹಣಿಯಾಗುತ್ತಿದ್ದು.ಇಲ್ಲಿಯವರಗೆ ಕಾಂಗ್ರೇಸ್ ಭದ್ರ ಕೋಟೆಯಾಗಿರುವ ಸಂಡೂರು ಕ್ಷೇತ್ರ ದಲ್ಲಿ ಕಮಲ ಹರಳಿಸಲು ಗಾಲಿ ಜನಾರ್ಧನ್ ರೆಡ್ಡಿ ಪಣ ತೊಟ್ಟಿದ್ದಾರೆ. ಒಂದು ವೇಳೆ ಈ ಕ್ಷೇತ್ರದಲ್ಲಿ ಕಮರ ಅರಳಿದರೆ ಅದು ಬಿಜೆಪಿಗೆ ಐತಿಹಾಸಿಕ ಗೆಲುವಾಗಿ ಪರಿಣಮಿಸುತ್ತದೆ.
ಅದರ ಜೊತೆಗೆ ಜರ್ನಾದನ ರೆಡ್ಡಿ ಪೋಲಿಟಿಕಲ್ ಕಂಬ್ಯಾಕ್ಗೆ ಒಳ್ಳೆ ಓಪನಿಂಗ್ ಸಿಕ್ಕಂತೆ ಆಗುವುದರಿಂದ ಜನಾರ್ಧನ್ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಕಚ್ಚೆ ಕಟ್ಟಿಕೊಂಡು ಹೋರಾಡಲು ಸಿದ್ದರಾಗಿದ್ದರೆ ಮತ್ತೊಂದೆಡೆ ಸಚಿವ ಸಂತೋಷ ಲಾಡ್ ಈ ಚುನಾವಣೆ ನನ್ನ ಮರ್ಯಾದೇ ಪ್ರಶ್ನೇ ಎಂದು ಮತಯಾಚನೆ ಮಾಡುತ್ತಿದ್ದಾರೆ.
ಕದನಕಣದಲ್ಲಿರುವ ಘಟಾನುಘಟಿಗಳ್ಯಾರಾರು ಎಂದು ಹೇಳುವುದಾದರೆ. ಕಾಂಗ್ರೆಸ್ ಪಕ್ಷದಿಂದ ಸಂತೋಷ ಲಾಡ್, ನಾಗೇಂದ್ರ, ಜಮೀರ್ ಅಹಮ್ಮದ್, ತುಕಾರಾಂ ರಣಾಂಗಣ ಪ್ರವೇಶಿಸಿದ್ದರೆ. ಬಿಜೆಪಿಯಿದ ಜನಾರ್ಧನ್ ರೆಡ್ಡಿ, ಶ್ರೀರಾಮುಲು, ಅನಿಲ್ ಲಾಡ್, ಕಾರ್ತೀಕ್ ಘೋರ್ಪಡೆ ಗೆಲುವಿಗಾಗಿ ಆತೊರೆಯುತ್ತಿದ್ದಾರೆ.