ಬೆಂಗಳೂರು : ನಗರದಲ್ಲಿರುವ ರಸ್ತೆಗುಂಡಿಗಳನ್ನ ಮುಚ್ಚಿದ್ದೇವೆ ಅಂತಾ ಬಿಬಿಎಂಪಿ ಬಿಲ್ಡಪ್ ಕೊಡ್ತಿದ್ರೆ. ಇತ್ತ ರಾಜಧಾನಿಯ ರಸ್ತೆಗಳಲ್ಲಿ ಗುಂಡಿ ಕಂಟಕ ಇನ್ನೂ ಕೂಡ ಸಿಟಿಜನರನ್ನ ಬಿಟ್ಟು ಬಿಡದೇ ಕಾಡ್ತಿದೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್ ಮುಂದುವರಿದಿದ್ದು, ರಸ್ತೆಗುಂಡಿಗಳ ಕಾಟಕ್ಕೆ ಸಿಟಿಮಂದಿ ಹೈರಾಣಾಗಿ ಬಿಟ್ಟಿದ್ದಾರೆ.
ರಾಜಧಾನಿಯ ರಸ್ತೆಗುಂಡಿಗಳನ್ನ ಮುಚ್ಚಲು ಫೀಲ್ಡ್ ಗಿಳಿದಿದ್ದ ಪಾಲಿಕೆ ದಿನಕ್ಕೊಂದು ವಲಯದಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿತ್ತು, ಡೆಡ್ ಲೈನ್ ಮುಗಿಯೋದರೊಳಗೆ ಬರೋಬ್ಬರಿ 14 ಸಾವಿರ ಗುಂಡಿ ಮುಚ್ಚಿದ್ದೇವೆ ಅಂತಾ ಹೇಳಿ ಕೊಳ್ತಿರೋ ಪಾಲಿಕೆ, ಡೆಡ್ ಲೈನ್ ಮುಗೀತಿದ್ದಂತೆ ಗುಂಡಿ ಮುಚ್ಚುವ ಕೆಲಸಕ್ಕೆ ಫುಲ್ ಸ್ಟಾಪ್ ಇಟ್ಟಿತ್ತು,ಇದೀಗ ನಗರದಲ್ಲಿ ಕಳೆದ ಒಂದುವಾರದಿಂದ ಸುರಿದ ನಿರಂತರ ಮಳೆಗೆ ನಗರದಲ್ಲಿ ಮತ್ತೆ ರಸ್ತೆಗುಂಡಿಗಳ ಬಾಯಿತೆರಿದು ನಿಂತಿವೆ, ಅಲ್ಲದೇ ಶಾಂತಿನಗರ, ಡಬಲ್ ರೋಡ್ ಕಡೆ ಹೋಗುವ ಮಿಷನ್ ರಸ್ತೆ ಸಂಪೂರ್ಣ ಹಾಳಾಗಿ, ರಸ್ತೆ ತುಂಬೆಲ್ಲ ಗುಂಡಿ ಬಿದ್ದಿರೋದ್ರಿಂದ ಗುಂಡಿಗಳ ಕಾಟಕ್ಕೆ ವಾಹನ ಸವಾರರು ಕಂಗಾಲಾಗಿ ಬಿಟ್ಟಿದ್ದಾರೆ.
ಒಟ್ಟಿನಲ್ಲಿ ರಾಜಧಾನಿಯ ರಸ್ತೆಗುಂಡಿಗಳನ್ನ ಮುಚ್ಚುವ ಆಟ ಆಡಿದ್ದ ಪಾಲಿಕೆ, ನಗರದ ಹಲವು ರಸ್ತೆಗಳಲ್ಲಿ ಇನ್ನೂ ಗುಂಡಿ ಕಂಟಕ ಇದ್ರೂ ಕೂಡ ಗುಂಡಿ ಮುಚ್ಚದೇ ಸೈಲೆಂಟ್ ಆಗಿದೆ.ಇತ್ತ ನಗರದಲ್ಲಿ ಮಳೆ ಬಂದ್ರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ರಸ್ತೆ ಮೇಲೆ ಇಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ,ಅದ್ರೆ ಅಧಿಕಾರಿಗಳು ಸಿಲಿಕಾನ್ ಸಿಟಿಯನ್ನು ಯಾವಾಗ ರಸ್ತೆ ಗುಂಡಿಗೆ ಮುಕ್ತಿ ನೀಡ್ತಾರೆ ಅಂತಾ ಕಾದೂ ನೋಡ್ಬೇಕಿದೆ.