Wednesday, January 22, 2025

By election 2024: ನಿಖಿಲ್ ಕುಮಾರಸ್ವಾಮಿಯಿಂದ ನಾಮಪತ್ರ ಸಲ್ಲಿಕೆ

ರಾಮನಗರ :  ಚನ್ನಪಟ್ಟಣ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು. ಮೈತ್ರಿ ಪಾಳಯದ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಇಂದು ಬೆಳಿಗ್ಗೆಯಿಂದಲೆ ಟೆಂಪಲ್ ರನ್ ಮಾಡಿದ ನಿಖಿಲ್ ಕುಟುಂಬದ ಜೊತೆ ಸೇರಿ ಕೆಂಗಲ್ ಹನುಮಂತರಾಯ  ದೇವರ ದರ್ಶನ ಮಾಡಿದರು. ನಾಮಪತ್ರ ಸಲ್ಲಿಕೆಗು ಮುನ್ನ ಶಕ್ತಿ ಪ್ರದರ್ಶನ ಮಾಡಿರುವ ದೋಸ್ತಿಗಳು ತೆರೆದ ವಾಹನದಲ್ಲಿ ಸುಮಾರು 1.50 ಕಿ.ಮೀ ಮೆರವಣಿಗೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ರೋಡ್​ಶೋನಲ್ಲಿ ಕುಮಾರ್​ಸ್ವಾಮಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಾದ ಆರ್.ಅಶೋಕ್, ಬಿ,ವೈ ರಾಘವೇಂದ್ರ, ಅಶ್ವತ್ ನಾರಯಣ್ ಸೇರಿದಂತೆ ಬಿಜೆಪಿ ಪ್ರಮುಖರು ಭಾಗವಹಿಸಿದರು. ಇವರೆಲ್ಲರ ಜೊತೆ ಮೈಸೂರು ಸಂಸದ ಯದುವೀರ್ ಒಡೆಯರ್​ ಕೂಡ ಈ ಮೆರವಣಿಗೆಯಲ್ಲಿ ಭಾಗವಹಿಸಿ ನಿಖಿಲ್​ ಕುಮಾರಸ್ವಾಮಿಗೆ ಬೆಂಬಲ ನೀಡಿದರು.

ಅಧಿಕೃತವಾಗಿ ಮಧ್ಯಾಹ್ನ 1:30 ಕ್ಕೆ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಮಯದಲ್ಲಿ ನಿಖಿಲ್ ಪತ್ನಿರೇವತಿ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ನಿಖಿಲ್ ಕುಮಾರಸ್ವಾಮಿಗೆ ಸಾಥ್ ನೀಡಿದರು.

RELATED ARTICLES

Related Articles

TRENDING ARTICLES