Monday, December 23, 2024

ರಸ್ತೆಯಲ್ಲಿದ್ದ ಮಗುವನ್ನು ಮನೆಗೆ ಕರೆದೊಯ್ದ ಮಹಿಳೆಯ ಮೇಲೆ ಅಪಹರಣದ ದೂರು !

ಚಿಕ್ಕಮಗಳೂರು: ರಸ್ತೆಯಲ್ಲಿ ಅಳುತ್ತಿದ್ದ ಮಗುವನ್ನ ಮನೆಗೆ ಕರೆದೊಯ್ದಿದ್ದ ಮಹಿಳೆಯನ್ನು ಅಪಹರಣವಾಗಿದೆ ಎಂದು ಅನುಮಾನ ಪಟ್ಟು ಹುಡುಕಾಟ ನಡೆಸಿದ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದಿದೆ.

ಕಡೂರು ಪಟ್ಟಣದ ಪುರಸಭೆ ಬಳಿ ನಿನ್ನೆ ಸಂಜೆ  ಘಟನೆ ನಡೆದಿದ್ದು.ಟಾಟಾ ಏಸ್ ನಲ್ಲಿ ಮಲಗಿದ್ದ 2 ವರ್ಷದ ಮಗುವನ್ನು ಮಹಿಳೆಯೊಬ್ಬರು ಎತ್ತಿಕೊಂಡು ಹೋಗಿದ್ದರು. ಆದರೆ ಆ ಮಗುವನ್ನು ಆ ಮಗುವಿನ ತಂದೆ ಗಾಡಿಯಲ್ಲಿ ಮಲಗಿಸಿ ಹೋಗಿದ್ದನು. ಮಗು ಎದ್ದಾಗ ತಂದೆ ಇಲ್ಲದನ್ನು ಕಂಡು ರಸ್ತೆಯಲ್ಲಿ ನಿಂತು ಆಳುತ್ತಿತ್ತು ಇದನ್ನು ಕಂಡ ಮಹಿಳೆ ಮಗು ಯಾರದ್ದು ಎಂದು ಅಕ್ಕಪಕ್ಕದ ಅಂಗಡಿಯವರನ್ನು ಕೇಳಿದ್ದಳು.

ಆದರೆ ಆ ಮಗು ಅಳುವುದನ್ನ ಕಂಡು ಮಹಿಳೆ ಮನೆಗೆ ಮನೆಗೆ ಕರೆದೊಯ್ದಿದ್ದಳು. ಆದರೆ ಇಂದು ಅಪಹರಣದ ಸುದ್ದಿ ಕೇಳಿ ಮಗುವನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಲಿಸರು ಮಗುವಿನ ಪೋಷಕರನ್ನು ಕರೆದು ಮಗವನ್ನು ಹಸ್ತಾಂತರಿಸಿದ್ದಾರೆ. ಮತ್ತು ಪೋಷರಕ ನಿರ್ಲಕ್ಷಕ್ಕೆ ಬುದ್ದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES