Wednesday, January 22, 2025

ಅತ್ತೆ-ಸೊಸೆ ಜಗಳ : ಸ್ವಂತ ಅತ್ತೆಯನ್ನೆ ಮುಗಿಸಿದ ಸೊಸೆ

ತುಮಕೂರು:  ಕ್ಷುಲಕ ಕಾರಣಕ್ಕೆ ಅತ್ತೆ ಮೇಲೆ ಸೊಸೆ ಹಲ್ಲೆ ಮಾಡಿದ್ದು. ಹಲ್ಲೆಗೊಳಗಾದ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ನಡೆದಿದೆ. ಸೊಸೆ ಉಮಾದೇವಿ ಹಲ್ಲೆಯಿಂದ ಅತ್ತೆ  ಕೆಂಪಮ್ಮ ಸಾವನ್ನಪ್ಪಿದ್ದು, ಆರೋಪಿ ಉಮಾದೇವಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಸೊಸೆ ರಮಾದೇವಿ ತನ್ನ ಸಹೋದರಿಗೆ ಪೋನ್ ಪೇ ಮೂಲಕ 7 ಸಾವಿರ ಹಣ ಕಳಿಸಿದ್ದಳು. ಇದರ ಕುರಿತು ಅತ್ತೆ ಕೆಂಪಮ್ಮ ತನ್ನ ಮಗ ರಾಜೇಶನಿಗೆ ಮಾಹಿತಿ ನೀಡಿದ್ದರು. ಇದನ್ನು ತಿಳಿದ ಪತಿ ರಾಜೇಶ್ ಹಣ ಯಾಕೆ ಕಳಿಸಿದ್ದಿಯಾ ಎಂದು ಪತ್ನಿ ಉಮಾದೇವಿ ಮೇಲೆ ಜಗಳ ಮಾಡಿದ್ದನು.

ಇದರಿಂದ ನೊಂದಿದ್ದ ಸೊಸೆ ತನ್ನ ಅತ್ತೆಯೊಂದಿಗೆ ಜಗಳ ಮಾಡಿ ನಿನ್ನಿಂದ ನೆಮ್ಮದಿ ಇಲ್ಲ ಎಂದು ಅತ್ತೆ ಕೆಂಪಮ್ಮನ ಕೈ ಹಾಗೂ ಕಾಲುಗಳಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಳು. ಈ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿದ್ದ ಕೆಂಪಮ್ಮಳನ್ನು ಮಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದನು. ಆದರೆ ಮನೆಗೆ ಬಂದ ಬಳಿಕ  ಅತ್ತೆ ಕೆಂಪಮ್ಮ ಮೃತರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸ್ಥಳಕ್ಕೆ ಎಸ್ ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪೊಲೀಸರು ಆರೋಪಿ ಉಮಾದೇವಿಯನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ,

RELATED ARTICLES

Related Articles

TRENDING ARTICLES