ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಬಾಬು ಸಾಹೇಬ್ ಪಾಳ್ಯದಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿತವಾಗಿ 9 ಜನ ಮೃತಪಟ್ಟ ಬೆನ್ನಲ್ಲೆ ಎಚ್ಚೆತ್ತಿರುವ ಸರ್ಕಾರ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಮ ಕೈಗೊಂಡಿದೆ.
ಇದೇ ರೀತಿ ನೆನ್ನೆ (ಅ.24)ರಂದು ಹೊರಮಾವು ಸ್ಥಳದಲ್ಲಿ 6 ಅಂತಸ್ತಿನ ಕಟ್ಟಡ ವಾಲಿಕೊಂಡು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಅದೇನ ರೀತಿಯಾಗಿ ಇಂದು ಬೆಂಗಳೂರಿನ ಕಮಲನಗರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿಯುವ ಅಂತಕ್ಕೆ ತಲುಪಿದ್ದು. ಇಂದು ಬೆಳಿಗ್ಗೆಯಿಂದಲೇ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ.
ತಿಮ್ಮಪ್ಪ ಎಂಬುವರು 25 ವರ್ಷಗಳ ಹಿಂದೆ ಮನೆ ನಿರ್ಮಾಣ ಮಾಡಿದ್ದರು. ಈಗ ಈ ಮನೆಯ ಕೆಳಗಿನ ನೀರಿನ ಸಂಪ್ ಕುಸಿದು ಆತಂಕ ಸೃಷ್ಟಿಯಾಗಿದ್ದು.ಮೂರು ಅಂತಸ್ತಿನ ಮನೆಯಲ್ಲಿ ಸುಮಾರು 5 ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ ದೊರೆತಿದೆ. ಮನೆಯಲ್ಲಿ ವಾಸವಾಗಿದ್ದ ಎಲ್ಲರನ್ನು ಸಮೀಪದ ಸಮುದಾಯ ಭವನಕ್ಕೆ ಶಿಫ್ಟ ಮಾಡಲಾಗಿದ್ದು. ಸ್ಥಳೀಯ ಶಾಸಕ ಗೋಪಾಲಯ್ಯ ಸೂಚನೆ ಮೇರೆಗೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಎರಡು ಕುಟುಂಬಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಬಿಲ್ಡಿಂಗ್ ಡೆಮಾಲಿಷನ್ (ತೆರವು) ಮಾಡಲು ಸಿದ್ಧತೆ ಮಾಡಿಕೊಂಡಿದ್ದು. ಹಿಟಾಚಿ ಮೂಲಕ ಮನೆ ತೆರವು ಮಾಡಲು ಸಿದ್ದತೆ ನಡೆಸಲಾಗಿದೆ. ಅಕ್ಕಪಕ್ಕದ ಮನೆಯರಿಗೆ ತೊಂದರೆಯಾಗದಂತೆ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಆಶ್ವಾಸನೆ ನೀಡಲಾಗಿದ್ದು. ಸ್ಥಳದಲ್ಲಿಯೇ ಬೀಡು ಬಿಟ್ಟಿರುವ ಬಿಬಿಎಂಪಿ ಅಧಿಕಾರಿಗಳು ಕಾರ್ಯಚರಣೆ ನಡೆಸಲು ಸಲಹೆಗಳನ್ನು ನೀಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.