Sunday, December 29, 2024

ಅನೈತಿಕ ಸಂಬಂಧಕ್ಕೆ ಅಡ್ಡಿ, ಪ್ರೇಯಸಿ ಪತಿಯ ಕೊಲೆಗೆ ಯತ್ನಿಸಿದ ಪೋಲಿಸ್

ಮಡಕೇರಿ : ಅನೈತಿಕ ಸಂಬಂಧಕ್ಕೆ ಅಡ್ಡಿ, ಪ್ರೇಯಸಿ ಪತಿಯನ್ನೇ ಕೊಲೆಗೆ ಯತ್ನಿಸಿದ ಘಟನೆ ಮಡಕೇರಿ ಬಳಿಯ ಸೋಮವಾರ ಪೇಟೆ ಬಳಿಯಲ್ಲಿ ನಡೆದಿದೆ. ಕೃತ್ಯ ನಡೆಸಲು ಮುಂದಾದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದು ಹೆಚ್ಚಿನ ತನಖೆ ನಡೆಸುತ್ತಿದ್ದಾರೆ.

ಉತ್ತರ ಕರ್ನಾಟಕ ಮೂಲದ ಕೊಟ್ರೇಶ್ ಶನಿವಾರಸಂತೆ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿದ್ದನು. ಶನಿವಾರಸಂತೆಯಲ್ಲಿ ವಾಸವಿದ್ದ ಪೇದೆ ಕೊಟ್ರೇಶ್ ಗೆ ಪಕ್ಕದ ಮನೆಯ ಆಯಿಷಾಳ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕೋಟ್ರೇಶ್​ಗೆ ನವೆಂಬರ್​ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯು ನಿಶ್ಷತಯವಾಗಿತ್ತು.

ಈ ಅನೈತಿಕ ಸಂಭದಕ್ಕೆ ಪ್ರೇಯಸಿಯ ಪತಿ ಅಡ್ಡಿಯಾಗಿದ್ದನು ಎಂಬ ಕಾರಣಕ್ಕೆ ಪ್ರೇಯಸಿಯ ಪತಿ ಇಫ್ರಾಜ್​ನ ಕೊಲೆಗೆ ಯತ್ನಿಸಿದ್ದನು. ಪ್ರಿಯತಮೆಯ ಕುಮ್ಮಕ್ಕಿನ ಮೇರೆಗೆ ಪೇದೆ ಕೋಟ್ರೇಶ್ ಇಫ್ರಾಜ್​ನನ್ನು ಮಂಗಳವಾರ ಮಲಗಿರುವಾಗ ಉಸಿರು ಕಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದನು. ನಿದ್ದೆಯಿಂದ ಎಚ್ಚೆಗೊಂಡ ಇಫ್ರಾಜ್ ಜೋರಾಗಿ ಕಿರುಚಿಕೊಂಡ ಹಿನ್ನಲೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ಸಂಬಂಧಿಕರು ಕಿರುಚಾಟ ಕೇಳಿ ಬಂದು ರಕ್ಷಿಸಿದ್ದಾರೆ.

ಆರೋಪಿ ಸ್ಥಳದಿಂದ ಓಡಿ ಹೋಗಿದ್ದು. ಬಳಿಕ ಇಫ್ರಾಜ್ ದೂರಿನ ಮೇರೆಗೆ ಶನಿವಾರಸಂತೆ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

 

RELATED ARTICLES

Related Articles

TRENDING ARTICLES